ಬೆಂಗಳೂರು: ಹಿರಿಯ ನಾಯಕ ಕೆಎನ್ ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆಯುವ ಪ್ರಯತ್ನ ಮಾಡಿದರು. ಅಶೋಕ್ ವಿಷಯವೊಂದನ್ನು ಪ್ರಸ್ತಾಪಿಸುತ್ತಾ, ಮುಖ್ಯಮಂತ್ರಿಯವರ ಮಾತು ಕೇಳಬೇಕೋ ಅಥವಾ ಡಿಪಿಅರ್ ಸೆಕ್ರೆಟರಿಗಳ ಮಾತು ಕೇಳಬೇಕೋ ಗೊತ್ತಾಗುತ್ತಿಲ್ಲ ಅಂದಾಗ ಪಕ್ಕದಲ್ಲಿ ಕುಳಿತಿದ್ದ ಅರವಿಂದ್ ಬೆಲ್ಲದ್, ಮುಖ್ಯಮಂತ್ರಿಗಳ ಮಾತು ಜನಗಳೇ ಕೇಳೋದಿಲ್ಲ ಅನ್ನುತ್ತಾರೆ.
ಅದಕ್ಕೆ ಅಶೋಕ, 2013 ರಿಂದ 2018ರವವರೆಗೆ ಮುಖ್ಯಮಂತ್ರಿಯಾಗಿದ್ದವರ ಮಾತು ಕೇಳಬೇಕು, ಇದನ್ನು ತಾವು ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಮಂತ್ರಿಗಳು ಹೇಳುತ್ತಾರೆ ಎನ್ನುತ್ತಾರೆ. ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಯಾಕೋ ನಿನ್ನೆಯಿಂದ ಸಿಎಂ ಡಲ್ ಆಗಿದ್ದಾರೆ ಅಂತ ಹೇಳಿದಾಗ, ಉಳಿದ ಶಾಸಕರು ಧ್ವನಿಗೂಡಿಸುತ್ತಾರೆ.
For More Updates Join our WhatsApp Group :