ತುಮಕೂರು: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿಂದುಳಿದ ವರ್ಗಗಳ ಅಗ್ರನಾಯಕರೆನಿಸಿಕೊಂಡಿರುವ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ವಾರಗಳೇ ಕಳೆದರೂ ಅವರ ಅಭಿಮಾನಿ ಮತ್ತು ಬೆಂಬಲಿಗರಲ್ಲಿ ಅಸಮಾಧಾನದ ಹೊಗೆ ಆರಿಲ್ಲ. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮಧುಗಿರಿ ಮತ್ತು ತುಮಕೂರಿನ ರಾಜಣ್ಣ ಅಭಿಮಾನಿಗಳು ದೆಹಲಿಗೆ ಹೋಗಿ ಜಂತರ್ ಮಂತರ್ ನಲ್ಲಿ ಅರೆಬೆತ್ತಲೆ ಮತ್ತು ಉಪವಾಸ ಸತ್ಯಾಗ್ರಹ ಮಾಡಲು ತಯಾರಾಗುತ್ತಿದ್ದಾರೆ.
ಸುಮಾರು ಎಂಟ್ಹತ್ತು ಸಾವಿರ ಅಭಿಮಾನಿಗಳು ದೆಹಲಿಗೆ ಹೋಗಲು ರೆಡಿಯಾಗಿದ್ದಾರೆ. ರಾಜಣ್ಣ ಅವರಿಗಾಗಿ ತಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಬೆಂಬಲಿಗರು ಹೇಳುತ್ತಾರೆ.
For More Updates Join our WhatsApp Group :