ರಜನಿಕಾಂತ್ ಅವರು ‘ಕೂಲಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿ ಇದ್ದು, ಆಗಸ್ಟ್ 14ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಜೆಟ್ 400 ಕೋಟಿ ರೂಪಾಯಿ ಮೀರಿದೆ. ಈ ಚಿತ್ರದ ಬಜೆಟ್ ಇಷ್ಟೆಲ್ಲ ಹೆಚ್ಚಲು ಕಾರಣ ರಜನಿಕಾಂತ್ ಅವರ ದೊಡ್ಡ ಮೊತ್ತದ ಸಂಭಾವನೆ.

ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ವಿಕ್ರಮ್’, ಕೈದಿ’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಲೋಕೇಶ್ ಅವರಿಗೆ ಇದೆ. ಅವರು ಚಿತ್ರವನ್ನು ಜವಾಬ್ದಾರಿಯುತವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಈಗ ಚಿತ್ರದ ಕಲಾವಿದರ ಸಂಭಾವನೆ ವಿಚಾರ ರಿವೀಲ್ ಆಗಿದೆ.
ರಜನಿಕಾಂತ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 260 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕೆಜಿಎಫ್’ನ ಬಜೆಟ್ 80 ಕೋಟಿ. ಅದರ ಮೂರು ಪಟ್ಟು ಎಂದರೆ 240 ಕೋಟಿ ರೂಪಾಯಿ ಆಗಲಿದೆ. ಮೂರು ಕೆಜಿಎಫ್ ಸಿನಿಮಾ ಮಾಡಿದ ಬಳಿಕವೂ 20 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಉಳಿಯಲಿದೆ. ಲೋಕೇಶ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 60 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ.
ರಜನಿಕಾಂತ್ ಅವರಿಗೆ ಈಗ ವಯಸ್ಸು 72. ಈ ವಯಸ್ಸಿನಲ್ಲೂ ನಟಿಸಬೇಕು ಎಂದರೆ ಅದು ತುಂಬಾನೇ ಕಷ್ಟ. ಹೀಗಾಗಿ, ಅವರು ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ದೇಶದ ದುಬಾರಿ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ನಟ ದಳಪತಿ ವಿಜಯ್ ಅವರು ‘ಕೂಲಿ’ ಚಿತ್ರಕ್ಕೆ ಬರೋಬ್ಬರಿ 275 ಕೋಟಿ ರೂಪಾಯಿ ವೇತನ ಪಡೆದಿರುವ ಬಗ್ಗೆ ವರದಿ ಆಗಿದೆ.