ರಣವೀರ್ ಸಿಂಗ್ ಅವರು ಕಾರಿನ ಬಗ್ಗೆ ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಆಗಾಗ ಹೊಸ ಕಾರುಗಳನ್ನು ಖರೀದಿ ಮಾಡುತ್ತಾರೆ. ಅವರ ಬಳಿ ಬೆಂಟ್ಲಿ, ರೇಂಜ್ ರೋವರ್ ರೀತಿಯ ಕಾರುಗಳು ಇವೆ. ಈಗ ಅವರ ಗ್ಯಾರೇಜ್ಗೆ ಹೊಸ ಕಾರೊಂದು ಸೇರ್ಪಡೆ ಆಗಿದೆ. ಲಕ್ಷುರಿ ಹಾಗೂ ಪವರ್ ಫುಲ್ ಹಮ್ಮರ್ ಇವಿ 3ಎಕ್ಸ್ ಕಾರನ್ನು ರಣವೀರ್ ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ. ಮುಂದಿನ ದಿನಗಳಲ್ಲಿ ಅವರು ಮುಂಬೈ ರಸ್ತೆಗಳಲ್ಲಿ ಈ ಕಾರಿನಲ್ಲಿ ಸುತ್ತಾಟ ನಡೆಸಿದರೂ ಅಚ್ಚರಿ ಏನಿಲ್ಲ.

ರಣವೀರ್ ಬಳಿ ಇಷ್ಟು ವಿವಿಧ ರೀತಿಯ ಕಾರುಗಳು ಇವೆ ನಿಜ. ಆದರೆ, ಅವರು ಈವರೆಗೆ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿರಲಿಲ್ಲ. ಈಗ ಅವರು ತಮ್ಮ ಹೆಸರಲ್ಲಿ ಹಮ್ಮರ ಖರೀದಿ ಮಾಡಿದ್ದಾರೆ. ಈ ಕಾರನ್ನು ಅವರ ಮುಂಬೈ ನಿವಾಸಕ್ಕೆ ಡೆಲಿವರಿ ನೀಡಲಾಗಿದೆ. ಈ ಕಾರು ಹಲವು ಫೀಚರ್ಗಳನ್ನು ಹೊಂದಿದೆ.
ರಣವೀರ್ ಖರೀದಿಸಿದ ಹಮ್ಮರ್ ಹೈ ಎಂಡ್ ಕಾರಾಗಿದ್ದು, ಇದರ ಎಕ್ಸ್ ಶೋ ರೂಂ. ಬೆಲೆ 3.85 ಕೋಟಿ ರೂಪಾಯಿ. ಟ್ಯಾಕ್ಸ್ ಹಾಗೂ ಇತರ ವಿಚಾರ ಸೇರಿದರೆ ಇದರ ಬೆಲೆ 4.57 ಕೋಟಿ ರೂಪಾಯಿ ಆಗಲಿದೆ. ರಣವೀರ್ ಸಿಂಗ್ ಬರ್ತ್ಡೇ ವಾರದಲ್ಲಿ ಈ ಕಾರು ಬಂದಿದೆ ಅನ್ನೋದು ವಿಶೇಷ. ಈ ಕಾರನ್ನು ಅವರು ಬರ್ತ್ಡೇ ದಿನವೇ ಪಡೆಯುವ ಆಲೋಚನೆಯಲ್ಲಿ ಇದ್ದರು. ಆದರೆ, ಸ್ವಲ್ಪ ತಡವಾಗಿದೆ.