ರಾಜ್ಕುಮಾರ್, ಕಮಲ್ ಹಾಸನ್ ಅಭಿಮಾನಿಗಳನ್ನು ನೆನಪಿಸಿದ ಕನ್ನಡಿಗರು
ರಣವೀರ್ ಸಿಂಗ್ ಉತ್ತಮ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರೇ ಶ್ರೇಷ್ಠ ಎಂದು ಅವರ ಫ್ಯಾನ್ಸ್ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ದಕ್ಷಿಣದ ಅಭಿಮಾನಿಗಳು ಕಮಲ್ ಹಾಸನ್, ಸೂರ್ಯ, ಕಮಲ್ ಹಾಸನ್, ರಜನಿಕಾಂತ್ ಅವರನ್ನು ನೆನಪಿಸಿದ್ದಾರೆ.
ರಣವೀರ್ ಸಿಂಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬ್ಯಾಂಡ್ ಬಜಾ ಭಾರತ್’ ಚಿತ್ರದ ಮೂಲಕ. ಆ ಬಳಿಕ ಅವರು ಐತಿಹಾಸಿಕ ಸಿನಿಮಾಗಳನ್ನು ಮಾಡಿದರು. ‘ಪದ್ಮಾವತ್’ ಸಿನಿಮಾದಲ್ಲಿನ ಖಿಲ್ಜಿ ಪಾತ್ರಕ್ಕೆ ಫ್ಯಾನ್ಸ್ ಹಾಗೂ ವಿಮರ್ಶಕರು ಫುಲ್ ಮಾರ್ಕ್ಸ್ ಕೊಟ್ಟರು. ‘ಧುರಂಧರ್’ ಸಿನಿಮಾದಲ್ಲಿ ಅವರ ನಟನೆ ಬೇರೊಂದು ಹಂತಕ್ಕೆ ಹೋಗಿದೆ. ಅವರ ವಿವಿಧ ಸಿನಿಮಾಗಳ ಪಾತ್ರಗಳನ್ನು ಸೇರಿಸಿ ಒಂದು ಪೋಸ್ಟರ್ ಮಾಡಲಾಗಿದೆ.
‘ದಕ್ಷಿಣ ಸಿನಿಮಾ ರಂಗದಲ್ಲಿ ಇಂತಹ ಓರ್ವ ಬಹುಮುಖ ನಟನನ್ನು ನನಗೆ ತೋರಿಸಿ, ನಾನು ನನ್ನ ಖಾತೆಯನ್ನು ಡಿಲೀಟ್ ಮಾಡುತ್ತೇನೆ’ ಎಂದು ಅದಿತಿ ಎಂಬುವವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜ್ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ರಾಜ್ಕುಮಾರ್ ನಟಿಸಿದ ಪಾತ್ರಗಳ ಫೋಟೋಗಳ ಕೊಲ್ಯಾಜ್ನ ಕಮೆಂಟ್ ಬಾಕ್ಸ್ ಅಲ್ಲಿ ಹಾಕಲಾಗಿದ್ದು, ‘ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಸಮಯ ಬಂದಿದೆ’ ಎಂದು ಬರೆಯಲಾಗಿದೆ.
ಕಮಲ್ ಹಾಸನ್, ಸೂರ್ಯ ಮೊದಲಾದ ಕಲಾವಿದರ ಅಭಿಮಾನಿಗಳು ಕೂಡ ತಮ್ಮಿಷ್ಟದ ನಟರ ಸಿನಿಮಾಗಳ ವಿವಿಧ ಪೋಸ್ಟರ್ಗಳನ್ನು ಸೇರಿಸಿ ಕಮೆಂಟ್ ಬಾಕ್ಸ್ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ಉತ್ತರ ನೀಡುವ ಕೆಲಸ ಮಾಡಲಾಗುತ್ತಿದೆ.
For More Updates Join our WhatsApp Group :




