ಬೆಂಗಳೂರು: ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇತ್ತೀಚೆಗೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದೀಗ ಮೃತ ಬಾಲಕಿಯ ವಿವರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹತ್ಯೆಯಾದ ಬಾಲಕಿ ಮರಿಯಮ್ (5) ಎಂದು ಆಕೆಯ ತಂದೆ ಗುರುತಿಸಿದ್ದಾರೆ.
ಜುಲೈ 3ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯ ತಾಯಿ ಹೀನಾ, ಗಂಡನನ್ನ ತೊರೆದು ರಾಜು ಎಂಬಾತನ ಜೊತೆ ವಾಸವಿದ್ದಳು. ಭಿಕ್ಷಾಟನೆ ಮಾಡಿಕೊಂಡಿದ್ದ ಹೀನಾ ಹಾಗೂ ರಾಜು ಜೊತೆಯಲ್ಲಿಯೇ ಮರಿಯಮ್ ಸಹ ಇರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮರಿಯಮ್ ಮೃತದೇಹ ಪತ್ತೆಯಾದ ದಿನದಿಂದಲೂ ಹೀನಾ ಹಾಗೂ ರಾಜು ನಾಪತ್ತೆಯಾಗಿದ್ದಾರೆ. ಇಬ್ವರೂ ಸೇರಿ ಮರಿಯಮ್ಳನ್ನು ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ಹೀನಾ ಹಾಗೂ ರಾಜುಗಾಗಿ ಬೆಂಗಳೂರು ಕೇಂದ್ರ ರೈಲ್ವೆ ಠಾಣಾ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.