ಕೋಲಾರ: 17 ವರ್ಷದ ಬಾಲಕ 18 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೆಜಿಎಫ್ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಯುವತಿ 8 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಯುವತಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಉರಿಗಾಂ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುವತಿ 17 ವರ್ಷದಳಾಗಿನಿಂದಲೇ ಬಾಲಕ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ ಎಂದು ತಿಳಿದುಬಂದಿದೆ.
ಆಟೋ ಡ್ರೈವರ್ನಿಂದ ಯುವತಿ ಮೇಲೆ ಅ *ತ್ಯಾಚಾರ.
ಓರ್ವ ಆಟೋ ಚಾಲಕ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಶುಕ್ರವಾರ (ಆ.08) ರಾತ್ರಿ ನಡೆದಿದೆ. 22 ವರ್ಷದ ಯುವತಿಯ ಮೇಲೆ ಮಗರಲ್ ಗ್ರಾಮದ ಆಟೋ ಚಾಲಕ ಮಹೇಶ್ (26) ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತ ಯುವತಿ ಜಾರ್ಖಂಡ್ ಮೂಲದವರಾಗಿದ್ದು, ನರಸಾಪುರ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ಯುವತಿ ಮೇಲೆ ಅತ್ಯಾಚಾರ ಎಸಗಿ ಆರೋಪಿ ಮಹೇಶ್ ತಲೆಮರೆಸಿಕೊಂಡಿದ್ದನು.
ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೆಳಗಾಗುವಷ್ಟರಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಪಿಐ ದಯಾನಂದ್ ನೇತೃತ್ವದಲ್ಲಿ ಆರೋಪಿ ಮಹೇಶ್ನನ್ನು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For More Updates Join our WhatsApp Group :




