ಆಂಜನೇಯನ ದೇವಸ್ಥಾನದಲ್ಲಿ ಭಕ್ತರಿಗೆ ನಿರ್ಭಯವಾಗಿ ಸೇರಿದ ಮಂಗ, ಎಲ್ಲರ ಮನ ಗೆದ್ದಿತು.
ಬಾಗಲಕೋಟೆ : ಜಿಲ್ಲೆಯ ಬಾದಾಮಿ ಪಟ್ಟಣದ ಬತ್ತೆರೇಶ್ ಆಂಜನೇಯ ದೇವಸ್ಥಾನದಲ್ಲಿ ಮಧ್ವನವಮಿ ಆಚರಣೆ ವೇಳೆ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಇನಾಂದಾರ ಕುಟುಂಬದವರಿಂದ ಮಧ್ವಾಚಾರ್ಯ ಜಯಂತಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಗವೊಂದು ದೇವಸ್ಥಾನಕ್ಕೆ ಆಗಮಿಸಿ ಭಕ್ತರ ನಡುವೆ ನಿರ್ಭಯವಾಗಿ ಓಡಾಡಿ ಎಲ್ಲರ ಗಮನ ಸೆಳೆದಿದೆ. ಪೂಜೆಯಲ್ಲಿ ನಿರತರಾಗಿದ್ದ ಭಕ್ತರ ಬಳಿ ಹೋಗಿ ತೊಡೆಯ ಮೇಲೆ ಕುಳಿತು ಅಚ್ಚರಿ ಮೂಡಿಸಿದೆ. ಯಾರಿಗೂ ಭಯಪಡದೆ ಪ್ರೀತಿಯಿಂದ ವರ್ತಿಸಿದ ಮಂಗ ಭಕ್ತರ ಮನ ಗೆದ್ದಿತು. ಈ ವೇಳೆ ಭಕ್ತರು ಮಂಗನಿಗೆ ಹಣ್ಣುಗಳನ್ನು ಪ್ರಸಾದವಾಗಿ ನೀಡಿದರು.
For More Updates Join our WhatsApp Group :




