ಸತ್ನ: ಗರ್ಭದಲ್ಲೇ ಶಿಶು ಸತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಘೋಷಿಸಿದ ಬಳಿಕ ಮಹಿಳೆ ಖಾಸಗಿ ಆಶ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ. ದುರ್ಗಾ ದ್ವಿವೇದಿ ಎಂಬುವವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಆಸ್ಪತ್ರೆಯ ವೈದ್ಯರು ಮಹಿಳೆಯ ಗರ್ಭದಲ್ಲೇ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ಕೂಡಲೇ ಮಹಿಳೆಯ ಪತಿ ತನ್ನ ಪತ್ನಿಯನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದುರ್ಗಾಳ ಪತಿ ರಾಹುಲ್ ದ್ವಿವೇದಿ ಅನುಮಾನ ಬಂದಿತ್ತು, ಮನವರಿಕೆಯಾಗದ ರಾಹುಲ್, ದುರ್ಗಾಳನ್ನು ಭಾರ್ಹತ್ ನಗರದಲ್ಲಿರುವ ಖಾಸಗಿ ರೋಗನಿರ್ಣಯ ಕೇಂದ್ರಕ್ಕೆ ಕರೆದೊಯ್ದರು. ಹೊಸ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಭ್ರೂಣವು ಜೀವಂತವಾಗಿದೆ ಮತ್ತು ಆರೋಗ್ಯಕರವಾಗಿದೆ ಎಂದು ದೃಢಪಡಿಸಿದ್ದರು.
ಕುಟುಂಬವು ತಕ್ಷಣ ದುರ್ಗಾಳನ್ನು ಖಾಸಗಿ ನರ್ಸಿಂಗ್ ಹೋಂಗೆ ಸ್ಥಳಾಂತರಿಸಿತು, ಅಲ್ಲಿ ಅವಳು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದಳು ಮತ್ತು 3.8 ಕಿಲೋಗ್ರಾಂಗಳಷ್ಟು ತೂಕದ ಗಂಡು ಮಗುವಿಗೆ ಜನ್ಮ ನೀಡಿದಳು. ತಾಯಿ ಮತ್ತು ಮಗು ಇಬ್ಬರೂ ಸ್ಥಿರವಾಗದ್ದಾರೆ.
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬವು ಒತ್ತಾಯಿಸಿದೆ. ನಾವು ಅವರ ಸಲಹೆಯನ್ನು ಪಾಲಿಸಿದ್ದರೆ, ನಮ್ಮ ಜೀವಂತ ಮಗು ಸಾಯುತ್ತಿತ್ತು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ಸತ್ನಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಎಲ್.ಕೆ. ತಿವಾರಿ ದೃಢಪಡಿಸಿದರು. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಹೇಳಿದರು.