ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ನಿರೀಕ್ಷೆ ಇಟ್ಟಿರುವ ಅಭ್ಯರ್ಥಿಗಳಿಗೆ ಸುಣೆಹಬ್ಬದ ಸುದ್ದಿ! ರೈಲ್ವೆ ನೇಮಕಾತಿ ಮಂಡಳಿ (RRB) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭಗೊಂಡಿದೆ.
ಅರ್ಹತೆ ಏನು?
- ಪದವೀಧರರು ಅರ್ಹರು: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
- ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 33 ವರ್ಷ (ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ಇದೆ).
ಅರ್ಜಿ ಶುಲ್ಕ ಎಷ್ಟು?
- UR/OBC/EWS: ₹500
- SC/ST/ಮಹಿಳಾ/PH: ₹250
(ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ನೋಡಿ)
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 14, 2025
- ಅರ್ಜಿಶುಲ್ಕ ಪಾವತಿ ಕೊನೆಯ ದಿನ: ಅಕ್ಟೋಬರ್ 16, 2025
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್: rrbapply.gov.in ಗೆ ಭೇಟಿ ನೀಡಿ
- “Account Create” ಆಯ್ಕೆ ಮಾಡಿ – ನೋಂದಣಿ ಪೂರ್ಣಗೊಳಿಸಿ
- ಲಾಗಿನ್ ಮಾಡಿ – ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ
- ಅರ್ಜಿಶುಲ್ಕ ಪಾವತಿ ಮಾಡಿ
- ಅರ್ಜಿಯನ್ನು ಸಲ್ಲಿಸಿ – ಪ್ರಿಂಟ್ಅೌಟ್ ತೆಗೆದುಕೊಳ್ಳಿ
ಈ ಸೆಕ್ಷನ್ ಕಂಟ್ರೋಲರ್ ಹುದ್ದೆಗಳು ರೈಲ್ವೆ ಕ್ಷೇತ್ರದಲ್ಲಿ ಉತ್ತಮ ಸಿವಿಲ್ ಸೇವೆ ಕಲ್ಪಿಸುವ ಅವಕಾಶವಿದ್ದು, ಪದವೀಧರರಿಗೆ ಮಹತ್ವದ ಅವಕಾಶ. ಆಸಕ್ತರು ಅರ್ಜಿಯನ್ನು ಅಂತಿಮ ದಿನಾಂಕಕ್ಕೆ ಮುನ್ನ ಸಲ್ಲಿಸಲು ಸೂಚಿಸಲಾಗಿದೆ.
For More Updates Join our WhatsApp Group :




