ರೇಣುಕಾಸ್ವಾಮಿ ಕೊಲೆ ಪ್ರಕರಣ | ಇತರ ನಟರ ಪಾತ್ರ ಇದ್ದರೆ ತನಿಖೆ ನಡೆಯುತ್ತೆ: ಜಿ.ಪರಮೇಶ್ವರ್

ನಮ್ಮನ್ನು ಜನಸಮುದಾಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಏನಾದ್ರೂ ದರ್ಶನ ಜತೆ ಇತರ ಸಹ ನಟರ ಪಾತ್ರ ಇದೆ ಅಂತ ವರದಿ ಬಂದರೆ ತನಿಖೆ ನಡೆಯುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ದರ್ಶನ್ ಜತೆ ಮತ್ತಷ್ಟು ನಟರಿಗೂ ಸಂಕಷ್ಟ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ದರ್ಶನ್ ಒಬ್ಬ ಚಿತ್ರನಟ, ಉಳಿದವರು ಅವರ ಸಂಪರ್ಕದಲ್ಲಿರೋದು ಸಹಜ. ಆದರೆ, ಉಳಿದ ನಟರಿಗೆ ಈ ಪ್ರಕರಣದಲ್ಲಿ ಲಿಂಕ್ ಇದೆ ಅಂತ ಹೇಳುವುದಕ್ಕೆ ಆಗಲ್ಲ. ಪ್ರಕರಣದ ತನಿಖೆಯಲ್ಲಿ ಏನಾದ್ರೂ ಸಹ ನಟರ ಪಾತ್ರ ಇದೆ ಅಂತ ಬಂದರೆ ಅವರಿಗೂ ತನಿಖೆ ನಡೆಯುತ್ತೆ ಎಂದರು.

ಇಂದು ಚಿತ್ರದುರ್ಗಕ್ಕೆ ತೆರಳಿ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡ್ತೇನೆ. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸ ಮಾಡ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ಕೊಡುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡ್ತೇನೆ. ಈಗ ತನಿಖೆ ನಡೆಯುತ್ತಿದೆ, ನೆರವಿನ ಬಗ್ಗೆ ಈಗಲೇ ನಿರ್ಧಾರ ಮಾಡುವುದು ಕಷ್ಟ ಎಂದರು. ಪಿಎಸ್ಐ ನೇಮಕಾತಿ ವಿಚಾರ ಅಂತಿಮ ಹಂತದಲ್ಲಿದೆ. ಕೆಲವು ತಾಂತ್ರಿಕ ಪ್ರಶ್ನೆಗಳನ್ನು ತೆಗೆಯಲಾಗಿದೆ. ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸ್ತೇವೆ. ಈ ಸಂಬಂಧ ನಾನು ಎರಡು ಮೂರು ಸಭೆ ನಡೆಸಿದ್ದೇನೆ. ಈ ವಾರ ಅಥವಾ ಮುಂದಿನ ವಾರದಲ್ಲಿ ಒಂದು ತೀರ್ಮಾನಕ್ಕೆ ಬರ್ತೇವೆ ಎಂದರು

Leave a Reply

Your email address will not be published. Required fields are marked *