ರಿಷಬ್ ಶೆಟ್ಟಿ ಅವರನ್ನು ಹೊಗಳಿ ಆರ್ಜಿವಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ, ‘ನಾನು ಓರ್ವ ಸಾಮಾನ್ಯ ಸಿನಿಮಾ ಲವರ್’ ಎಂದು ರಿಷಬ್ ಶೆಟ್ಟಿ ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ಜಿವಿ ಅವರು ಬೇರೆ ನಿರ್ದೇಶಕರನ್ನು ತೆಗಳಿ ರಿಷಬ್ನ ಮತ್ತಷ್ಟು ಹೊಗಳಿದ್ದಾರೆ.
ರಾಮ್ ಗೋಪಾಲ್ ವರ್ಮಾ ಯಾವುದೇ ರೀತಿಯ ಟ್ವೀಟ್ ಮಾಡಿದರೂ ಅದು ವಿಚಿತ್ರವಾಗಿರುತ್ತದೆ. ಇದು ಅವರು ಮೊದಲಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಈಗ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಆರ್ಜಿವಿ ವಿಶ್ ಮಾಡಿದ್ದಾರೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಅವರು ಈ ವೇಳೆ ಮಾಡಿದ ಪದ ಬಳಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
ರಿಷಬ್ ಶೆಟ್ಟಿ ಅವರನ್ನು ಹೊಗಳಿ ಆರ್ಜಿವಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ, ‘ನಾನು ಓರ್ವ ಸಾಮಾನ್ಯ ಸಿನಿಮಾ ಲವರ್’ ಎಂದು ರಿಷಬ್ ಶೆಟ್ಟಿ ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ಜಿವಿ ಅವರು ಬೇರೆ ನಿರ್ದೇಶಕರನ್ನು ತೆಗಳಿ ರಿಷಬ್ನ ಮತ್ತಷ್ಟು ಹೊಗಳಿದ್ದಾರೆ.
‘ನಿಜ ಹೇಳಬೇಕು ಎಂದರೆ ನೀವು ಸಿನಿಮಾ ಲವರ್ ಅಲ್ಲ. ನೀವು ಸಿನಿಮಾನ ಅದ್ಭುತವಾಗಿ ಮಾಡುವವರು. ನಿಮ್ಮ ಸಿನಿಮಾ ಮೇಕಿಂಗ್ನಿಂದ ಎಲ್ಲಾ ನಿರ್ದೇಶಕರನ್ನು ಬಗ್ಗು ಬಡಿದಿದ್ದೀರಿ. ಇದು ಹೊಸ ರೀತಿಯ ಸಿನಿಮಾ ಮೇಕಿಂಗ್. ಹೊಸ ರೀತಿಯ ಸಿನಿಮಾ ಮೇಕಿಂಗ್ ಹುಟ್ಟು ಹಾಕಿದ್ದೀರಿ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಈ ವೇಳೆ ಅವರು ಬಳಕೆ ಮಾಡಿದ ಪದಗಳು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಅವರು ಎಫ್ ಪದಗಳನ್ನು ಹೊಗಳಿಕೆ ಬಳಕೆ ಮಾಡಿದ್ದಾರೆ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಾ ಇವೆ. ಆರ್ಜಿವಿ ಈ ರೀತಿ ಪದ ಬಳಕೆ ಮಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ.
For More Updates Join our WhatsApp Group :