ಉಡುಪಿ: ಆನೆ “ಸುಭದ್ರೆ” ಯನ್ನು own ಮಾಡಿಕೊಳ್ಳುವ ವಿಷಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಹೋನ್ನಾಳಿಯ ಹಿರೇಕಲ್ಮಠ ನಡುವೆ ಈಡೆತ್ತದ ಸಂಘರ್ಷ ಜೋರಾಗಿದೆ.
ಮೂಲತಃ ಉಡುಪಿಯ ಮಠದ ಆಸ್ತಿಯಾಗಿದ್ದ ಈ ಹೆಣ್ಣು ಆನೆ, ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ 2019ರಲ್ಲಿ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಕ್ಕೆ ಕಳುಹಿಸಲಾಗಿತ್ತು. ಗುಣಮುಖವಾದ ನಂತರ ಆಕೆಯನ್ನು ವಾಪಸ್ ಪಡೆಯುವಲ್ಲಿ ಉಡುಪಿಯ ಮಠ ಮುಂದಾಗದೆ ಇದ್ದಾಗ, ಹಿರೇಕಲ್ಮಠ 12.2 ಲಕ್ಷ ರೂ. ಹಣ ಪಾವತಿಸಿ, ಸರ್ಕಾರದ ನಿಯಮಾನುಸಾರವಾಗಿ ಆನೆಯನ್ನು ತನ್ನ ಮಠಕ್ಕೆ ಕರೆದುಕೊಂಡು ಹೋಗಿತ್ತು.
ಆರೈಕೆ ಮಾಡದವರೆ ಇನ್ನೆಂದಿಗೆ ಹಕ್ಕು ಕೇಳಬೇಕು?
ಆನೆಯನ್ನು ಸಾಕಲು ಸಾಧ್ಯವಿಲ್ಲವೆಂದು ಉಡುಪಿ ಮಠವೇ ಸ್ಪಷ್ಟವಾಗಿ ಹೇಳಿದ ನಂತರ, ಹಿರೇಕಲ್ಮಠ ಆಕೆಗೆ ಔಷಧೋಪಚಾರ ನೀಡಿ ಆರೋಗ್ಯಪೂರ್ಣವಾಗಿ ಬೆಳೆಸಿದ ವಿಚಾರ ಈಗ ವಿವಾದದ ಕೇಂದ್ರವಾಗಿದೆ. ಇದೀಗ ಆನೆ ಚೇತರಿಸಿಕೊಂಡಿರುವುದರಿಂದ ಉಡುಪಿಯ ಮಠ, ಲಾರಿ ಸಹಿತ ಆನೆಯನ್ನು ಮರಳಿ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ.
ಕಾನೂನು ಸ್ಪಷ್ಟ – ಸುಭದ್ರೆ ಈಗ ಹಿರೇಕಲ್ಮಠದ ಆಸ್ತಿಯೇ!
- ಸುಭದ್ರೆ ಈಗ ಕಾನೂನುಬದ್ಧವಾಗಿ ಹಿರೇಕಲ್ಮಠದ ಆಸ್ತಿಯಾಗಿದ್ದು, ಸರ್ಕಾರದ ನಿಯಮ ಪ್ರಕಾರ ಪಾವತಿಸಿ, ಸರಿಯಾದ ಪ್ರಕ್ರಿಯೆ ಮೂಲಕ ಆಕೆಯನ್ನು ತಂದಿರುವುದಾಗಿ ಮಠದ ಆಡಳಿತ ಮಂಡಳಿ ಹೇಳುತ್ತಿದೆ.
- ಎಷ್ಟೊಂದು ಪ್ರಯತ್ನಗಳ ನಂತರವೂ ಉಡುಪಿ ಮಠದಿಂದ ಸ್ಪಷ್ಟ ಸಹಕಾರ ದೊರೆಯದೆ ಹಿನ್ನಲೆ, ಹಿರೇಕಲ್ಮಠವು ಆನೆ ಖರೀದಿ ಪ್ರಕ್ರಿಯೆಗೆ ಮುಂದಾದಿತ್ತು.
- ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತುಕತೆ ನಡೆಸಿದ ಹಿರೇಕಲ್ಮಠ, ಸುಭದ್ರೆಯನ್ನು ಈಗ ಅಲ್ಲಿಯೇ ಉಳಿಸಿಕೊಳ್ಳಲು ಸಮ್ಮತಿ ಪಡೆದಿದೆ.
For More Updates Join our WhatsApp Group :




