ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?
ನಟ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ‘ಕಾಂತಾರ: ಚಾಪ್ಟರ್ 1’ ಹಿಟ್ ಆದ ಬಳಿಕ ಅವರು ತಂಡದ ಜೊತೆ ಮಂಗಳೂರಿಗೆ ತೆರಳಿದ್ದರು. ಈ ವೇಳೆ ರಿಷಬ್ ಕಾಲ ಮೇಲೆ ದೈವಾರಾಧಕ ಮಲಗಿದ್ದು ಚರ್ಚೆಗೆ ಕಾರಣ ಆಗಿದೆ. ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ ಎಂಬಾ ಮಾತುಗಳು ಕೇಳಿ ಬಂದಿವೆ. ಈ ಹರಕೆ ಕೋಲ ದೈವಾರಾಧನೆಯ ನಿಯಮಗಳ ವಿರುದ್ಧವಾಗಿ ನಡೆಯಿತಾ ಎಂಬ ಪ್ರಶ್ನೆಯೂ ಮೂಡಿದೆ.
ಗುರುವಾರ (ಡಿಸೆಂಬರ್ 4) ಮಂಗಳೂರಿನ ಬಾರೆಬೈಲ್ ಅಲ್ಲಿ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗು ಬಂಟ ದೈವಸ್ಥಾನದಲ್ಲಿ ಹರಕೆ ಕೋಲ ನಡೆಯಿತು. ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿದೆ. ‘ತುಳುನಾಡಿನ ದೈವಾರಾಧನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ.ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದೈವರಾಧಕ ತಮ್ಮಣ್ಣ ಶೆಟ್ಟಿ ಮಾತನಾಡಿದ್ದಾರೆ. ‘ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ. ಈಗ ಹರಕೆಯ ನೇಮೋತ್ಸವದಿಂದ ದೈವರಾಧನೆ ಸಂಪೂರ್ಣ ಮುಗಿಯಿತು ಎಂಬಂತಾಗಿದೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ರಿಷಬ್ ಶೆಟ್ಟಿಗೆ ಡೇಟ್ ಇದೆ ಎಂದು ಕದ್ರಿ ಮಂಜುನಾಥನನ್ನು ಬದಿಗೆ ಬಿಟ್ಟು ಇವರು ನೇಮ ಮಾಡಿದ್ದಾರೆ’ ಎಂದು ತಮ್ಮಣ್ಣ ಹೇಳಿದ್ದಾರೆ.
‘ನರ್ತಕ ಹಾಕಿದ ಬಟ್ಟೆಗಳೆಲ್ಲಾ ದೈವರಾಧನೆಗೆ ವಿರುದ್ಧವಾಗಿದೆ. ಅವರು ಡ್ಯಾನ್ಸರ್ಗಳು ಹಾಕುವ ಬಟ್ಟೆ ಹಾಕಬಾರದು. ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ಪಲ್ಟಿ ಹೊಡೆಯುವ ದೈವಗಳು ಬೇರೆ ಇದೆ. ಇತ್ತೀಚೆಗೆ ನಡೆದಿರುವ ನೇಮ ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
For More Updates Join our WhatsApp Group :




