ಬೆಂಗಳೂರು: ಸೂಪರ್ ಹಿಟ್ ಆಗಿದ್ದ ‘ಕಾಂತಾರ’ ಚಿತ್ರದ ಬಳಿಕ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಭಾರೀ ರಿಸ್ಕ್ ತೆಗೆದುಕೊಂಡಿದ್ದು, ಎಲ್ಲಾ ಅಪಾಯಕಾರಿ ಸ್ಟಂಟ್ಗಳನ್ನು ಸ್ವತಃ ಮಾಡಿದ್ದಾರೆ ಎಂಬುದು ಈಗ ದೊಡ್ಡ ಚರ್ಚೆಯಾಗಿದೆ.
ರಿಷಬ್ ಮಾಡಿದ ಸಾಹಸಗಳು ಚಿತ್ರದ ಸ್ಟಂಟ್ ಕೊರಿಯೋಗ್ರಾಫರ್ ಅರುಣ್ ರಾಜ್ ಹೇಳುವ ಪ್ರಕಾರ, ಕಳರಿಪಯಟ್ಟು ಕಲೆ ಸ್ವತಃ ಕಲಿತಿದ್ದಾರೆ., ಖಡ್ಗ ಯುದ್ಧ ಮಾಡಿದ್ದಾರೆ. ಕುದುರೆ ಸವಾರಿ, ಸಾಹಸಮಯ ಸನ್ನಿವೇಶಗಳಲ್ಲಿ ಡ್ಯೂಪ್ ಬಳಸದೆಯೇ ಅಭಿನಯಿಸಿದ್ದಾರೆ.ಅವರು ಹೇಳುವಂತೆ, “ನಾನು ಹಲವು ನಟರ ಜೊತೆ ಕೆಲಸ ಮಾಡಿದ್ದೇನೆ. ಆದರೆ ರಿಷಬ್ ಶೆಟ್ಟಿಯ ಮನೋಭಾವನೆ ವಿಭಿನ್ನ. ಡ್ಯೂಪ್ ಬಳಸುವುದಿಲ್ಲ. ದೃಶ್ಯ ಪರ್ಫೆಕ್ಟ್ ಆಗಿ ಮೂಡಿಬರುವವರೆಗೂ ಅವರು ಮರುಮರು ಮಾಡುತ್ತಾರೆ” ಎಂದಿದ್ದಾರೆ.
ಭಾರಿ ನಿರೀಕ್ಷೆಯ ಸಿನಿಮಾ: ‘ಕಾಂತಾರ’ ಬ್ಲಾಕ್‌ಬಸ್ಟರ್ ಆದ ನಂತರ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯನ್ನೂ ಮಾಡಿದ್ದಾರೆ. ಸಂಗೀತ: ಬಿ. ಅಜನೀಶ್ ಲೋಕನಾಥ್, ಛಾಯಾಗ್ರಹಣ: ಅರವಿಂದ್ ಕಶ್ಯಪ್.
ರಿಲೀಸ್ ಡೇಟ್: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ. ಫ್ಯಾನ್ಸ್ ಈಗಾಗಲೇ ಸಿನಿಮಾದ ಸ್ಟಂಟ್ಗಳು ಹಾಗೂ ಭಾರೀ ದೃಶ್ಯಗಳಿಗಾಗಿ ಕಾದಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH