ವಾರಣಾಸಿ : ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ ರಿಷಬ್ ಶೆಟ್ಟಿ, ತಮ್ಮ ನೂತನ ಯಾತ್ರೆಯಲ್ಲಿ ಈಗ ಕಾಶಿಯ ಪವಿತ್ರ ಭೂಮಿಗೆ ಕಾಲಿರಿಸಿದ್ದಾರೆ. ಅಲ್ಲಿ ಅವರು ಕಾಶಿ ವಿಶ್ವನಾಥ ದೇವಸ್ಥಾನದ ದರ್ಶನ ಪಡೆದಿದ್ದು, ನಂತರ ಗಂಗಾ ನದಿಯ ತಟದಲ್ಲಿ ನಡೆದ ಗಂಗಾ ಆರತಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ವಿಡಿಯೋ ವೈರಲ್, ಭಕ್ತಿಭಾವ ಹೆಚ್ಚಿದ ಶೆಟ್ಟಿ!
ಗಂಗೆಯ ತೀರದಲ್ಲಿ ಆರತಿಗೆ ಕುಳಿತು ಭಕ್ತಿಯಿಂದ ಅದನ್ನು ನೋಡುವ ರಿಷಬ್ ಶೆಟ್ಟಿ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಕ್ತಿಯಿಂದ ತಮ್ನ್ಮಯಗೊಂಡ ಅವರ ಮುಖಭಾವ ಎಲ್ಲರ ಮನ ಗೆದ್ದಿದೆ.
ಉತ್ತರ ಭಾರತದಲ್ಲೂ ಶೆಟ್ರ ಗೆಲುವು!
ಕೇವಲ ದಕ್ಷಿಣ ಭಾರತದಲ್ಲಷ್ಟೇ ಅಲ್ಲ, ಉತ್ತರ ಭಾರತದಲ್ಲೂ ರಿಷಬ್ ಶೆಟ್ಟಿ ಅವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ ಎಂಬುದು ಈ ಭೇಟಿಯಿಂದ ಸ್ಪಷ್ಟವಾಗಿದೆ. ಕಾಶಿಯಲ್ಲಿ ಅವರಿಗೆ ಸೇರಿ ಅನೇಕರು ಸೆಲ್ಫಿಗೆ ಸಾಲಿನಲ್ಲಿ ನಿಂತು, ಅಭಿಮಾನ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ದ ಭಾವನೆಗಳಿಂದ… ಧಾರ್ಮಿಕತೆ ಕಡೆಗೆ
‘ಕಾಂತಾರ’ ಚಿತ್ರವು ದೈವ-ಭಕ್ತಿಯ ತತ್ವವನ್ನು ತೆರೆದಿಟ್ಟಿದ್ದು, ಅದೇ ಭಾವನೆಗಳು ರಿಷಬ್ ಅವರ ಜೀವನಕ್ಕೂ ಪ್ರಭಾವ ಬೀರುತ್ತಿರುವಂತಿದೆ. ಅವರ ಈ ಯಾತ್ರೆ ಹಾಗೂ ಧಾರ್ಮಿಕ ದೃಢತೆ ಅಭಿಮಾನಿಗಳಿಗೆ ಇನ್ನಷ್ಟು ನಿಕಟವಾಗಿಸಿದೆ.
For More Updates Join our WhatsApp Group :




