ಐಪಿಎಲ್ 2025ರ ಮೆಗಾ ಹರಾಜಿಗೆ ಎಲ್ಲಾ 10 ಫ್ರಾಂಚೈಸಿಗಳು ತಯಾರಿ ಮಾಡಿಕೊಳ್ಳುತ್ತಿವೆ. ನವೆಂಬರ್ 24-25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಾಲ್, ಇಶಾನ್ ಕಿಶನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಬಾರಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಮೆಗಾ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಭಿಮಾನಿಗಳಿಗಾಗಿ ಅಣಕು ಹರಾಜು ಪ್ರಕ್ರಿಯೆ ನಡಸಿದೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಅಣಕು ಹರಾಜು ಪ್ರಕ್ರಿಯೆ ನಡೆದಿದೆ. ಎಲ್ಲಾ 10 ಫ್ರಾಂಚೈಸಿಗಳ ಅಭಿಮಾನಿಗಳ ತಂಡವನ್ನು ಮಾಡಿ, ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಲ್ಲಾ 10 ತಂಡಗಳು ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಅಭಿಮಾನಿಗಳು ಹರಾಜು ಪ್ರಕ್ರಿಯೆನ್ನು ಆನಂದಿಸಿದರು.
ರಿಷಬ್ ಪಂತ್ಗೆ ₹16 ಕೋಟಿ
ಅಣಕು ಹರಾಜಿನಲ್ಲಿ ಆರ್ ಸಿಬಿ ಅಭಿಮಾನಿಗಳ ತಂಡವು ರಿಷಬ್ ಪಂತ್‌ರನ್ನು ಬರೋಬ್ಬರಿ 16 ಕೋಟಿ ರೂಪಾಯಿ ನೀಡುವ ಮೂಲಕ ತಂಡಕ್ಕೆ ಸೇರಿಸಿಕೊಂಡರು. ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದು ಯಾವ ತಂಡಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಕುತೂಹಲ ಇದೆ. ಎಬಿ ಡಿವಿಲಿಯರ್ಸ್ ಕೂಡ ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನ ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ರಿಷಬ್ ಪಂತ್ ಹೊರತುಪಡಿಸಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 8 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾದರು. ಕೃನಾಲ್ ಪಾಂಡ್ಯ 6.5 ಕೋಟಿ ರೂಪಾಯಿಗೆ ಹರಾಜಾದರು. ಅಚ್ಚರಿ ಎನ್ನುವಂತೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಗಾಗಿ ಯಾವ ತಂಡದ ಅಭಿಮಾನಿಗಳು ಹೆಚ್ಚಿನ ಪೈಪೋಟಿ ನಡೆಸಿಲ್ಲ ಅವರನ್ನು ಆರ್ ಸಿಬಿ 2.5 ಕೋಟಿ ರೂಪಾಯಿಗೆ ಖರೀದಿ ಮಾಡಿದರು. ಜೋಶ್ ಹೇಜಲ್‌ವುಡ್‌ಗೆ 3 ಕೋಟಿ ರೂಪಾಯಿ ನೀಡಿ ಆರ್ ಸಿಬಿ ಖರೀದಿ ಮಾಡಿತು. ವೇಗದ ಬೌಲರ್ ಟಿ ನಟರಾಜನ್ ಖರೀದಿ ಮಾಡಲು ಎಲ್ಲಾ ತಂಡಗಳು ಪ್ರಯತ್ನ ಪಟ್ಟಿದ್ದರಿಂದ ಅವರು 10.5 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾದರು
ಉಳಿದಂತೆ ಶಫಾನೆ ರುದರ್ ಪೋರ್ಡ್ 1 ಕೋಟಿ ರೂಪಾಯಿ, ಆಲ್‌ರೌಂಡರ್ ವಿಲ್ ಜ್ಯಾಕ್ಸ್ಗೆ 10.5 ಕೋಟಿ ರೂಪಾಯಿ ನೀಡಿದರು. ವನಿಂದು ಹಸರಂಗ 4 ಕೋಟಿ ರೂಪಾಯಿಗೆ ಹರಾಜಾದರು.