ಸೇಲಂ || Police Station ಬಳಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಯ Murder ಹ*.

ಸೇಲಂ || Police Station ಬಳಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಯ Murder ಹ*.

ಸೇಲಂ : ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಪೊಲೀಸ್ ಠಾಣೆ ಬಳಿಯೇ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತ ಆರೋಪಿಯನ್ನು ಮದನ್ ಅಲಿಯಾಸ್ ಅಪ್ಪುಲು ಎಂದು ಗುರುತಿಸಲಾಗಿದೆ. ತೂತುಕುಡಿ ಮೂಲದವನಾಗಿದ್ದು, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದ.

ಬೆಳಗ್ಗೆ 10 ಗಂಟೆ ವೇಳೆಗೆ ತಮ್ಮ ಪತ್ನಿ ಜತೆಗೆ ಪೊಲೀಸ್ ಸ್ಟೇಷನ್ಗೆ ಬಂದಿದ್ದ, ನಿತ್ಯವೂ ಠಾಣೆಗೆ ಬಂದು ಸಹಿಹಾಕುವ ನಿಯಮವಿದೆ. ಅಲ್ಲಿಂದ ಊಟ ಮಾಡಲೆಂದು ಹೋಟೆಲ್ಗೆ ಹೋಗಿದ್ದ. ಹೋಟೆಲ್ನಲ್ಲಿ ಕುಳಿತಿದ್ದಾಗ ಮೂವರು ಅಪಚರಿತರುಇದ್ದಕ್ಕಿದ್ದಂತೆ ಅವರನ್ನು ಸುತ್ತುವರೆದು ಹರಿತವಾದ ಆಯುಧಗಳಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಹಸ್ತಂಪಟ್ಟಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮದನ್ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆಂದು ಸೇಲಂನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆ ನಡೆಯುತ್ತಿದೆ. ಆರು ಸದಸ್ಯರ ಗ್ಯಾಂಗ್ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ದಾಳಿಕೋರರನ್ನು ಗುರುತಿಸಲು ಮತ್ತು ಬಂಧಿಸಲು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *