ಸಮಂತಾ ತಂದೆ ಜೋಸೆಫ್ ಪ್ರಭು ವಿಧಿವಶ

ಸಮಂತಾ ತಂದೆ ಜೋಸೆಫ್ ಪ್ರಭು ವಿಧಿವಶ

ಸೌತ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ತಂದೆ (Father) ಜೋಸೆಫ್ ಪ್ರಭು (Joseph Prabhu) ಅವರು  ವಿಧಿವಶರಾಗಿದ್ದಾರೆ. ದುಃಖದ ಈ ವಿಚಾರವನ್ನು ಸ್ವತಃ ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

ಮತ್ತೆ ನಾವು ಸಿಗವವರೆಗೆ ಅಪ್ಪ’ ಎಂದು ಸಮಂತಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ನಟಿಯ ತಂದೆ ಬಳುತ್ತಿದ್ದರು. ಇದೀಗ ನಟಿಯ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸಿನಿಮಾಗಳಲ್ಲಿ ನಟಿ ಅದಷ್ಟೇ ಬ್ಯುಸಿಯಿದ್ದರೂ ಕೂಡ ಕುಟುಂಬದ ಬೆಂಬಲವನ್ನು ನೆನೆಯುತ್ತಿದ್ದರು. ಇಂದು ಸಮಂತಾ ಸ್ಟಾರ್ ನಟಿಯಾಗಿ ಗೆದ್ದಿರೋದ್ದಕ್ಕೆ ಅವರ ಕುಟುಂಬದ ಬೆಂಬಲ ಸಾಕಷ್ಟೀದೆ. ನಾಗಚೈತನ್ಯ ಜೊತೆ ಸಮಂತಾ ಡಿವೋರ್ಸ್ ಪಡೆದುಕೊಂಡಿದ್ದ ಸಂದರ್ಭದಲ್ಲಿ ತಂದೆ ಜೋಸೆಫ್ ಬೇಸರ ಮಾಡಿಕೊಂಡಿದ್ದರು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ಹಿಡಿದಿತ್ತು.

Leave a Reply

Your email address will not be published. Required fields are marked *