ಬೆಂಗಳೂರು:ರಾಜಧಾನಿಯ ರಸ್ತೆಗಳ ಗುಂಡಿಗಳ ವಿಚಾರ ಇದೀಗ ರಾಜ್ಯದ ಮುಖ್ಯಚರ್ಚೆಯ ವಿಷಯವಾಗಿದೆ. ಸಾರ್ವಜನಿಕರ ಆಕ್ರೋಶ, ಐಟಿ ಕಂಪನಿಗಳ ಅಸಮಾಧಾನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದಾರೆ.
“ಆಗದಿದ್ದರೆ ಕಠಿಣ ಕ್ರಮ ತಪ್ಪದು!” — ಸಿಎಂ ಎಚ್ಚರಿಕೆ:
“ಪ್ರತಿಯೊಂದು ವಾರ್ಡ್‌ನ ಎಂಜಿನಿಯರ್ ಗಳು ಯಾವ ಕಾರ್ಯ ಮಾಡಿದ್ದಾರೆ?
ರಸ್ತೆ ಗುಂಡಿಗಳನ್ನು ಮುಚ್ಚದೆ ಸುಮ್ಮನೆ ಕುಳಿತರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಖಡಕ್ ಸೂಚನೆ ನೀಡಿದರು.
ಸಭೆಯ ಪ್ರಮುಖ ತೀರ್ಮಾನಗಳು:
ಗುಂಡಿಗಳ ಬಗ್ಗೆ ಮಾಹಿತಿ:
- ನಗರದಲ್ಲಿ ಒಟ್ಟು 14,795 ಗುಂಡಿಗಳು ಪತ್ತೆಯಾಗಿವೆ
- ಇದರಲ್ಲಿ ಈಗಾಗಲೇ 6,749 ಮುಚ್ಚಲಾಗಿದೆ, ಇನ್ನೂ 8,046 ಗುಂಡಿ ಬಾಕಿ ಇದೆ
- ಅಕ್ಟೋಬರ್ 31ರೊಳಗೆ ಎಲ್ಲವೂ ಮುಕ್ತಾಯಗೊಳ್ಳಬೇಕು
ರಸ್ತೆ ಕಾಮಗಾರಿ ಪ್ರಗತಿ:
- 108.20 ಕಿ.ಮೀ ವೈಟ್ ಟಾಪಿಂಗ್ ಪೂರ್ಣಗೊಂಡಿದೆ
- 143.68 ಕಿ.ಮೀ ವೈಟ್ ಟಾಪಿಂಗ್ ಪ್ರಗತಿಯಲ್ಲಿದೆ
- 401.63 ಕಿ.ಮೀ ಡಾಂಬರೀಕರಣ ಪೂರ್ಣಗೊಂಡಿದ್ದು
- ಇನ್ನೂ 440.92 ಕಿ.ಮೀ ಕಾಮಗಾರಿ ನಡೆಯುತ್ತಿದೆ
- ಒಟ್ಟು 584.60 ಕಿ.ಮೀ ರಸ್ತೆಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿ
ಅನುದಾನ ಹಾಗೂ ತಂತ್ರಜ್ಞಾನ:
- ₹18 ಕೋಟಿ – ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ಗುದ್ದಲಿಗೆ
- ₹25 ಕೋಟಿ – ತುರ್ತು ನಗರ ಪಾಲಿಕೆ ಕಾಮಗಾರಿಗಳಿಗೆ ಬಿಡುಗಡೆ
- ₹2.5 ಕೋಟಿ – ಜೆಟ್ ಪ್ಯಾಚರ್ ಯಂತ್ರಗಳ ಟೆಂಡರ್ ಪ್ರಕ್ರಿಯೆ
- ತೇವಾಂಶವಿರುವ ಪರಿಸ್ಥಿತಿಯಲ್ಲೂ ಈ ತಂತ್ರಜ್ಞಾನದಿಂದ ಗುಂಡಿ ಮುಚ್ಚಲು ಸಾಧ್ಯ
ಜಂಟಿ ಕೆಲಸಕ್ಕಾಗಿ ಸಮನ್ವಯಾಧಿಕಾರಿ ನೇಮಕ:
ಬಿಡಿಎ, ಬಿಎಂಡಿಎ, ಬಿಎಂಪಿ, ಜಲಮಂಡಳಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಂಸ್ಥೆಗಳ ಸಮನ್ವಯಕ್ಕಾಗಿ ಒಬ್ಬ ತಾಂತ್ರಿಕ ಅಧಿಕಾರಿಯನ್ನು ನೇಮಿಸಲು ನಿರ್ಧಾರ.
ಈ ಭಾಗಗಳಲ್ಲಿ ಸಮಸ್ಯೆ ತೀವ್ರ:
- ಇಬ್ಬಲೂರು ಜಂಕ್ಷನ್
- ಅಗರ, ವೀರಣ್ಣನ ಪಾಳ್ಯ, ನಾಗವಾರ, ಹೆಬ್ಬಾಳ ಜಂಕ್ಷನ್
ಈ ಭಾಗಗಳಲ್ಲಿ ಮೆಟ್ರೋ ಹಾಗೂ ಜಲಮಂಡಳಿಯ ಕಾಮಗಾರಿಯಿಂದ ರಸ್ತೆ ಹಾಳಾಗಿದ್ದು, ₹400 ಕೋಟಿ ವೆಚ್ಚದಲ್ಲಿ ಸಮಗ್ರ ರಸ್ತೆ ಅಭಿವೃದ್ಧಿ ಯೋಜನೆ ಜಾರಿಗೆ ಬರಲಿದೆ.
ಸಿಎಂ ಸ್ಪಷ್ಟ ವಾಣಿ:
“ಮಳೆಗಾಲ ಆರಂಭಕ್ಕೂ ಮುನ್ನವೇ ರಸ್ತೆ ಕಾಮಗಾರಿ ಮಾಡಬೇಕಾಗಿತ್ತು. ಮಳೆ ಬಿದ್ದ ಮೇಲೆ ಶುರು ಮಾಡಿದರೆ ಸಮಸ್ಯೆ ಉಂಟಾಗುತ್ತದೆ. ಮುಂದೆ ತಪ್ಪು ಮರುಕಳಿಸಬಾರದು.”
For More Updates Join our WhatsApp Group :




