ಶಾರುಖ್ ಖಾನ್ ಅವರು ತಮ್ಮ ಹೊಸ ಚಿತ್ರ ‘ಕಿಂಗ್’ನ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಮತ್ತು ಅವರು ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಚಿತ್ರಗಳ ಯಶಸ್ಸಿನ ನಂತರ ಈ ಘಟನೆ ನಡೆದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಶಾರುಖ್ ಖಾನ್ ಅವರು ಸದ್ಯ ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾದ ಶೂಟ್ ಕೂಡ ಆರಂಭ ಆಗಿತ್ತು. ಆದರೆ, ಶೂಟಿಂಗ್ ವೇಳೆ ಉಂಟಾದ ಎಡವಟ್ಟಿನಿಂದ ಅವರಿಗೆ ಗಾಯ ಆಗಿದೆ. ಈ ಕಾರಣಕ್ಕೆ ಅವರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಹೀಗಾಗಿ, ‘ಕಿಂಗ್’ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ.
ಶಾರುಖ್ ಖಾನ್ ಅವರು 2023ರಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಹಿಟ್ ಆದವು. ಆ ಬಳಿಕ ಶಾರುಖ್ ಖಾನ್ ಯಾವುದೇ ಸಿನಿಮಾನ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ಅವರು ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಇದ್ದಾರೆ.