ಪೊಲೀಸರ ಎನ್‌ಕೌಂಟರ್‌ನಲ್ಲಿ ಶಾರ್ಪ್ ಶೂಟರ್ ಬಲಿ

ನವದೆಹಲಿ: ಪಶ್ಚಿಮ ದಿಲ್ಲಿಯ ಐಷಾರಾಮಿ ಕಾರ್ ಶೋರೂಮ್‌ನಲ್ಲಿ ಗುಂಡಿನ ದಾಳಿ ನಡೆಸಿದ ಶಾರ್ಪ್ ಶಂಕಿತ ಶೂಟರ್ ಇಂದು ಮುಂಜಾನೆ ಶಹಬಾದ್ ಡೈರಿ ಪ್ರದೇಶದ ಬಳಿ ದೆಹಲಿ ಪೊಲೀಸ್ ವಿಶೇಷ ತಂಡದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ.

ಅಜಯ್ ಅಲಿಯಾಸ್ ಗೋಲಿ ಶಾರ್ಪ್ ಶೂಟರ್ ಈತ ಪೋರ್ಚುಗಲ್ ಮೂಲದ ದರೋಡೆಕೋರ ಹಿಮಾಂಶು ಭಾವುವಿನ ತಂಡದ ಶಾರ್ಪ್ ಶೂಟರ್ ಆಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳ ಬಗ್ಗೆ ಮಾಹಿತಿ ಪಡೆದು ದೆಹಲಿ ಪೊಲೀಸ್ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು ಆರೋಪಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದನ್ನು ಗಮನಿಸಿ ಅವರನ್ನು ಅಡ್ಡಗಟ್ಟಿದ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದರು. ಎಚ್ಚೆತ್ತ ಪೊಲೀಸ್ ತಂಡ ಪ್ರತಿದಾಳಿ ನಡೆಸಿದಾಗ ಅಜಯ್‌ಗೆ ಗುಂಡು ತಾಗಿ ಸಾವನ್ನಪ್ಪಿದ್ದಾನೆ.

ಹರಿಯಾಣದ ರೋಹ್ಟಕ್ ಮೂಲದ ಅಜಯ್, ರಾಜ್ಯ ಮತ್ತು ದೆಹಲಿಯಲ್ಲಿ ಹತ್ತಾರು ಕೊಲೆ, ಕೊಲೆ ಯತ್ನ ಮತ್ತು ಶಸಾ?ತ್ರಸ್ತç ಕಾಯ್ದೆಯಡಿ ದಾಖಲಾಗಿರುವ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮಾರ್ಚ್ ೧೦ ರಂದು ಸೋನಿಪತ್‌ನ ಮುರ್ತಾಲ್‌ನಲ್ಲಿ ನಡೆದ ಉದ್ಯಮಿಯ ಕೊಲೆಯಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ ೬ ರಂದು, ಅಜಯ್ ಅವರು ಮೋಹಿತ್ ರಿಧೌ (೨೭) ಎಂಬಾತನೊAದಿಗೆ ತಿಲಕ್ ನಗರ ಪ್ರದೇಶದಲ್ಲಿನ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಶೋ ರೂಂನಲ್ಲಿ ಗುಂಡಿನ ದಾಳಿ ನಡೆಸಿದ್ದರು. ಗಾಜಿನ ಬಾಗಿಲು ಮತ್ತು ಕಿಟಕಿ ಗಾಜುಗಳಿಗೆ ಗುಂಡುಗಳು ತಗುಲಿ ಏಳು ಮಂದಿ ಗಾಯಗೊಂಡಿದ್ದರು.

ಶೋರೂAನ ಮಾಲೀಕರಿಗೆ ಅಂತರರಾಷ್ಟಿçÃಯ ಸಂಖ್ಯೆಯಿAದ ಕರೆ ಬಂದಿದ್ದು, ಕರೆ ಮಾಡಿದವರು ಆತನಿಂದ ೫ ಕೋಟಿ ರೂ ಬೇಡಿಕೆ ಇಟ್ಟಿದ್ದರು.ನೀಡದಿದಾಗ ಗುಂಡಿನ ದಾಳಿ ಮಾಡಿದ್ದರು.ಪ್ರಕರಣ ದಾಖಲಾಗಿ ನಂತರಆರೋಪಿ ರಿಧೌಯನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *