ಈ ಭೂಮಿಯ ಘನತೆ ಈಕೆಗೆ ಗೊತ್ತು ನೋಡಿ, patriotic ಮೆರೆದ ಗೋಮಾತೆ

ಈ ಭೂಮಿಯ ಘನತೆ ಈಕೆಗೆ ಗೊತ್ತು ನೋಡಿ, patriotic ಮೆರೆದ ಗೋಮಾತೆ

ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಂತು ಗೌರವ ಸೂಚಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯಗಳಲ್ಲಿ ಒಂದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಖಂಡಿತವಾಗಿ ಹೇಳಿಕೊಟ್ಟಿರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹಸುವೊಂದು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು, ಸ್ವಲ್ಪವು ಅಲುಗಾಡದೇ ತಟಸ್ಥವಾಗಿಯೇ ನಿಂತುಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಜನಗಣಮನ ಈ ನಮ್ಮ ರಾಷ್ಟ್ರಗೀತೆ ಯನ್ನು ಕೇಳುವಾಗ ಮೈಮನವೆಲ್ಲಾ ಒಂದು ಕ್ಷಣ ರೋಮಾಂಚನವಾಗುತ್ತದೆ. ಹೌದು, ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಆದರೆ ಸುಶಿಕ್ಷಿತರೆನಿಸಿಕೊಂಡ ಜನರೇ  ಅಗೌರವ ತೋರುವಂತಹ ಘಟನೆಗಳು ನಡೆಯುತ್ತಿರುತ್ತದೆ.  ಇದೀಗ ಅಪರೂಪದ ವಿಡಿಯೋವೊಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ಗೋಮಾತೆಯೊಂದು ರಾಷ್ಟ್ರಗೀತೆಗೆ ಗೌರವ ಕೊಟ್ಟು ದೇಶಭಕ್ತಿ ಮೆರೆದಿದ್ದು, ಈ ವಿಡಿಯೋ ನೋಡಿ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

malleshmumulgi ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಹಸುವೊಂದು ರಾಷ್ಟ್ರಗೀತೆಗೆ ಗೌರವ ಕೊಟ್ಟು ನಿಂತಿರುವುದನ್ನು ನೋಡಬಹುದು. ಈ ವಿಡಿಯೋಗೆ ಗೋಮಾತೆ ರಾಷ್ಟ್ರಗೀತೆಗೆ ಕೊಟ್ಟ ಸಮ್ಮಾನ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಶಾಲಾ ಆವರಣದಲ್ಲಿ ಸಾಲಾಗಿ ಮಕ್ಕಳು ನಿಂತುಕೊಂಡಿದ್ದು, ಶಿಕ್ಷಕರ ಜೊತೆ ಸೇರಿ ರಾಷ್ಟ್ರಗೀತೆಯನ್ನು ಹಾಡುತ್ತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಅಲ್ಲೇ ಇದ್ದ ಹಸುವೊಂದು ಅತ್ತಿಂದ ಇತ್ತ ಅಲುಗಾಡದೇ ತಟಸ್ಥವಾಗಿ ನಿಂತುಕೊಳ್ಳುವ ಮೂಲಕ ಗೌರವ ಸೂಚಿಸಿದೆ.

Leave a Reply

Your email address will not be published. Required fields are marked *