ದುಬೈನಲ್ಲಿ ನಡೆಯುತ್ತಿರುವ ಸೈಮಾ 2025 ಪ್ರಶಸ್ತಿ ಸಮಾರಂಭದಲ್ಲಿ ಮಲಯಾಳಂ ಸಿನಿರಂಗದ ಕಲಾವಿದರು ಹಾಗೂ ಸಿನಿಮಾಗಳು ಕಂಗೊಳಿಸಿವೆ. ಸೆಪ್ಟೆಂಬರ್ 5ರಂದು ಕನ್ನಡ ಮತ್ತು ತೆಲುಗು ವಿಭಾಗಗಳಿಗೆ ಪ್ರಶಸ್ತಿ ಘೋಷಿಸಲ್ಪಟ್ಟಿದ್ದರೆ, ನಿನ್ನೆ ರಾತ್ರಿ (ಸೆಪ್ಟೆಂಬರ್ 6) ತಮಿಳು ಮತ್ತು ಮಲಯಾಳಂ ವಿಭಾಗದ ಅತ್ಯುತ್ತಮ ಪ್ರತಿಭಾವಂತರಿಗೆ ಗೌರವ ಸಲ್ಲಿಸಲಾಯಿತು.
ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಆಡುಜೀವಿತಂ ಸಿನಿಮಾ ಬಿಡುಗಡೆಯ ಸಮಯದಿಂದಲೇ ಚರ್ಚೆಯಲ್ಲಿತ್ತು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಲ್ಲೂ ಮಿಸ್ ಆದ ಈ ಚಿತ್ರ, ಸೈಮಾದಲ್ಲಿ ತನ್ನದೇ ಆದ ಮಿಂಚು ತೋರಿದೆ.
ಸೈಮಾ 2025 – ಮಲಯಾಳಂ ವಿಜೇತರ ಪಟ್ಟಿ:
* ಅತ್ಯುತ್ತಮ ಸಿನಿಮಾ: ಮಂಜುಮೆಲ್ ಬಾಯ್ಸ್
* ಅತ್ಯುತ್ತಮ ನಿರ್ದೇಶಕ: ಬ್ಲೆಸ್ಸಿ (ಆಡುಜೀವಿತಂ)
* ಅತ್ಯುತ್ತಮ ನಟ: ಪೃಥ್ವಿರಾಜ್ ಸುಕುಮಾರನ್ (ಆಡುಜೀವಿತಂ)
* ಅತ್ಯುತ್ತಮ ನಟಿ: ಊರ್ವಶಿ (ಉಳೊಲ್ಲುಕ್ಕು)
* ಅತ್ಯುತ್ತಮ ಹಾಸ್ಯ ನಟ: ಶ್ಯಾಮ್ ಮೋಹನ್ (ಪ್ರೇಮಲು)
* ಅತ್ಯುತ್ತಮ ವಿಲನ್: ಜಗದೀಶ್ (ಮಾರ್ಕೊ)
* ವಿಮರ್ಶಕರ ಆಯ್ಕೆ ಅತ್ಯುತ್ತಮ ನಟ: ಉನ್ನಿ ಮುಕುಂದನ್
* ಅತ್ಯುತ್ತಮ ಹೊಸ ನಿರ್ದೇಶಕ: ಜೋಜು ಜಾರ್ಜ್ (ಪನಿ)
* ಅತ್ಯುತ್ತಮ ಹೊಸ ನಟ: ಕೆಆರ್ ಗೋಕುಲ್ (ಆಡುಜೀವಿತಂ)
* ಅತ್ಯುತ್ತಮ ಹೊಸ ನಟಿ: ನೇಹಾ ನಳನೀನ್ (ಕ್ವಾಲಬ್)
* ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ (ಕಿಷ್ಕಿಂದ ಕಾಂಡಂ)
*ಅತ್ಯುತ್ತಮ ಪೋಷಕ ನಟಿ: ಅಖಿಲಾ ಭಾರ್ಗವನ್ (ಪ್ರೇಮಲು)
* ಅತ್ಯುತ್ತಮ ಸಿನಿಮಾಟೊಗ್ರಾಫರ್: ಶೆಹ್ನಾದ್ ಜಲಾಲ್ (ಉಳೊಲ್ಲುಕ್ಕು, ಬ್ರಹ್ಮಯುಗಂ)
* ಅತ್ಯುತ್ತಮ ಗೀತ ಸಾಹಿತ್ಯ: ಸುಹೈಲ್ ಕೋಯು (ಪ್ರೇಮಲು)
* ಅತ್ಯುತ್ತಮ ಸಂಗೀತ ನಿರ್ದೇಶಕ: ದಿಬು ನಿನಾನ್ ಥಾಮಸ್ (ಎಆರ್ಎಂ)
* ಅತ್ಯುತ್ತಮ ಗಾಯಕಿ:ವೈಕಾಮ್ ವಿಜಯಲಕ್ಷ್ಮಿ (ಅಂಗು ವಾನ ಕೊನಿಲು – ಎಆರ್ಎಂ)
* ಅತ್ಯುತ್ತಮ ಗಾಯಕ: ಕೆಎಸ್ ಹರಿಶಂಕರ್ (ಕಿಲಿಯೇ – ಎಆರ್ಎಂ)
ಈ ಬಾರಿ ಮಲಯಾಳಂ ಸಿನಿರಂಗದಲ್ಲಿ ‘ಆಡುಜೀವಿತಂ ಬಹು ಮುಖ್ಯ ಪ್ರಶಸ್ತಿಗಳನ್ನು ಪಡೆದುಕೊಂಡರೆ, ‘ಮಂಜುಮೆಲ್ ಬಾಯ್ಸ್ಅತ್ಯುತ್ತಮ ಚಿತ್ರದ ಗೌರವಕ್ಕೆ ಪಾತ್ರವಾಗಿದೆ.
For More Updates Join our WhatsApp Group :