ಈ ದೇಶಕ್ಕೆ ಕಾಲಿಡುವ ಪ್ರವಾಸಿಗರಿಗೆ ಶಾಕ್? ಯಾಕೆ?

ಈ ದೇಶಕ್ಕೆ ಕಾಲಿಡುವ ಪ್ರವಾಸಿಗರಿಗೆ ಶಾಕ್? ಯಾಕೆ?

ಇಂಡೋನೇಷ್ಯಾ ಇತ್ತೀಚಿಗೆ ಆಪಲ್ ಬಿಡುಗಡೆ ಮಾಡಿದ ಇತ್ತೀಚಿನ ಮಾದರಿಯ ಐಫೋನ್ 16 ಅನ್ನು ನಿಷೇಧಿಸಿದೆ. ಇಂಡೋನೇಷ್ಯಾ ದೇಶವೂ ಈ ಫೋನ್‌ನ ಮಾರಾಟ ಮತ್ತು ಬಳಕೆಗೆ ನಿರ್ಬಂಧಗಳನ್ನು ಹಾಕಿದೆ. ಅಷ್ಟೇ ಅಲ್ಲ ಬೇರೆ ದೇಶಗಳಲ್ಲಿ ಖರೀದಿಸಿದ ಫೋನ್ ಇಂಡೋನೇಷ್ಯಾ ದೇಶದಲ್ಲಿ ಬಳಸುವುದನ್ನು ಸಹ ನಿಷೇಧಿಸಿದೆ. ಪ್ರವಾಸೋದ್ಯಮಕ್ಕೆ ಆ ದೇಶಕ್ಕೆ ಹೋಗಬೇಕು ಎನ್ನುವ ಪ್ರವಾಸಿಗರಿಗೆ ಈ ರೂಲ್ಸ್ ಹೊಸ ತಲೆನೋವಾಗಿ ಪರಿಣಮಿಸಿದೆ.

ಇಂಡೋನೇಷ್ಯಾದ ಕೈಗಾರಿಕಾ ಸಚಿವ ಗುಮಿವಾಂಗ್ ಕರ್ತಸಸ್ಮಿತಾ ಇತ್ತೀಚೆಗೆ ಐಫೋನ್ 16 ಬಳಕೆ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಆ ಫೋನ್ ಅನ್ನು ಬಳಸಲು ಯಾವುದೇ IಒಇI ಪ್ರಮಾಣೀಕರಣವಿಲ್ಲ ಎಂದು ಹೇಳಲಾಗಿದೆ. ಯಾರಾದರೂ ಬಳಸಿದರೆ ಅಕ್ರಮವಾಗುತ್ತದೆ ಎಂದರು. ಅಂತಹ ಯಾವುದೇ ವಿಷಯಗಳು ಕಂಡು ಬಂದಲ್ಲಿ ಮಾಹಿತಿ ತಿಳಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.

ಇಂಡೋನೇಷ್ಯಾದಲ್ಲಿ ಹೂಡಿಕೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಆಪಲ್ ವಿಫಲವಾದ ನಂತರ ಇಂಡೋನೇಷ್ಯಾ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಇಂಡೋನೇಷ್ಯಾ ಸರ್ಕಾರದ ನಿರ್ಧಾರದಿಂದ ಆಪಲ್‌ಗೆ ತುಂಬಾ ಆಶ್ಚರ್ಯಕರವಾಗಿದೆ. ಏಕೆಂದರೆ ಟಿಮ್ ಕುಕ್ ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಸಂವಾದ ನಡೆಸಿದಾಗ, ಈ ಭೇಟಿಯು ಅತ್ಯಂತ ಯಶಸ್ವಿಯಾಯಿತು. ಸಭೆಯ ನಂತರ ಕುಕ್ ಇಂಡೋನೇಷ್ಯಾದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿದರು. ಈಗ ಸರ್ಕಾರದ ಈ ನಿರ್ಧಾರ ಕಂಪನಿಯ ಮೇಲೆ ಪರಿಣಾಮ ಬೀರಬಹುದು. iPhon 16 ಸರಣಿಯು ಬಹಳ ಜನಪ್ರಿಯವಾಗಿದೆ.

Leave a Reply

Your email address will not be published. Required fields are marked *