ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅನೇಕ ಬಾರಿ ಕೋಪಗೊಂಡಿದ್ದು ಇದೆ. ಪಾಪರಾಜಿಗಳು, ಅಭಿಮಾನಿಗಳು ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಸಿಟ್ಟು ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪಾಪರಾಜಿಗಳ ಮೇಲೆ ಜಯಾ ಕುಪಿತಗೊಂಡಿದ್ದಾರೆ. ಅವರ ಕೋಪ ಮಿತಿಮೀರಿತ್ತು.
ಜಯಾ ಬಚ್ಚನ್ ಅವರು ಈವೆಂಟ್ ಒಂದರಿಂದ ಹೊರ ಬರುತ್ತಿದ್ದರು. ಈ ವೇಳೆ ಅವರ ಫೋಟೋ ತೆಗೆಯಲು ಕೆಲವು ಪಾಪರಾಜಿಗಳು ಪ್ರಯತ್ನಿಸಿದ್ದಾರೆ. ‘ಬಾಯ್ ಮೇಡಂ’ ಎಂದಿದ್ದಾರೆ ಪಾಪರಾಜಿಗಳು. ಇದರಿಂದ ಅವರು ಸಿಟ್ಟಾದರು. ಏಕಾಏಕಿ ಪಾಪರಾಜಿಗಳ ವಿರುದ್ಧ ಕೂಗಾಡಿದರು.
‘ಬಾಯ್ಮುಚ್ಕೊಂಡು ಫೋಟೋ ತೆಗೆಯಿರಿ. ನಾಟಕ ಮಾಡಬೇಡಿ. ಫೋಟೋ ತೆಗೆಯೋದು ಅಷ್ಟೇ ಕೆಲಸ. ಕಮೆಂಟ್ ಮಾಡ್ತಾ ಇರ್ತೀರಾ’ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ಈ ವೇಳೆ ಅವರು ಮಾಸ್ಕ್ ಧರಿಸಿದ್ದರು. ಜಯಾ ಬಚ್ಚನ್ ಅವರು ನಡೆದುಕೊಂಡ ರೀತಿಗೆ ಕೆಲವರು ಅಸಮಧಾನ ಹೊರಹಾಕಿದ್ದಾರೆ. ಇನ್ನೂ ಕೆಲವರು ಅಮಿತಾಭ್ ಬಚ್ಚನ್ ಅವರನ್ನು ಇದರಲ್ಲಿ ಎಳೆದು ತಂದಿದ್ದಾರೆ.
‘ಅಮಿತಾಭ್ ಬಚ್ಚನ್ ಅವರು ಜಯಾ ಜೊತೆ ಹೇಗೆ ಸಂಸಾರ ಮಾಡುತ್ತಾರೋ ಏನೋ. ಪ್ರತಿ ವಿಚಾರಕ್ಕೂ ಅವರು ಕೂಗಾಡಬಹುದು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಜಯಾ ಅವರು ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ಪಾಪರಾಜಿ ಸಂಸ್ಕೃತಿ ಬಾಲಿವುಡ್ನಲ್ಲಿ ಹೆಚ್ಚುತ್ತಿದೆ. ಸೆಲೆಬ್ರಿಟಿಗಳು ಎಲ್ಲೇ ಹೋದರೂ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಬರುತ್ತಾರೆ.
ಜಯಾ ಬಚ್ಚನ್ ಅವರು ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಅವರು ಅನೇಕ ಬಾರಿ ಇದೇ ರೀತಿ ಕೂಗಾಡಿದ್ದು ಇದೆ. ಅವರ ಆ್ಯಟ್ಯಿಟ್ಯೂಡ್ ಅನೇಕರಿಗೆ ಇಷ್ಟ ಆಗುವುದಿಲ್ಲ. ಇದನ್ನು ಅನೇಕರು ಖಂಡಿಸಿದ್ದು ಇದೆ.
For More Updates Join our WhatsApp Group :
