ಸಿದ್ದರಾಮಯ್ಯ ಅವರ ಬಳಿ 4 ಜೊತೆ ಬಟ್ಟೆನೂ ಇಲ್ಲʼ

ಬೆಂಗಳೂರು: ಮುಡಾ ಹಗರಣ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಮುಡಾ ಕುರಿತು ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಬ್ಯಾಟಿಂಗ್ ಬಿಸಿದ್ದಾರೆ.

ಮುಡಾ ಹಗರಣದ ಕುರಿತು ಕಾಂಗ್ರೆಸ್ ನಾಯಕ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಮಾತನಾಡಿ, ಸಿದ್ದರಾಮಯ್ಯ ಅವರ ಬಳಿ ನಾಲ್ಕ್ ಜೊತೆ ಬಟ್ಟೆನೂ ಇಲ್ಲ. ಇಂಥವರ ಮೇಲೆ ಹಗರಣದ ಆರೋಪ ಮಾಡೋದು ಎಷ್ಟು ಸರಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಮುಡಾ ಅಕ್ರಮದಲ್ಲಿ ದೂರುದಾರನಾಗಿರುವ ಟಿಜೆ ಅಬ್ರಾಹಂ ವಿರುದ್ಧ ಕೆಜಿಎಫ್ ಬಾಬು ಅವರು ಕಿಡಿಕಾರಿದ್ದು, ‘ಟಿಜೆ ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್ , ರೌಡಿ, ಅಫಿಷಿಯಲ್ ಗುಂಡಾ ಎಂದು ಹೇಳಿದ್ದಾರೆ. ಈತನ ಹೆಸರು ಕೇಳಿದರೆ ಡಿಸಿಗಳು ಕೂಡ ಭಯ ಬೀಳ್ತಾರೆ. ಅಧಿಕಾರಿಗಳಿಗೆ ಭಯ ಬೀಳಿಸೋದು, ಧಮ್ಕಿ ಹಾಕೋದಕ್ಕೆ ಟಿಜೆ ಅಬ್ರಾಹಂ ಫೇಮಸ್. ನನಗೆ ಎಲೆಕ್ಷನ್ ಟೈಮ್ ನಲ್ಲಿ ಖಾಸಗಿ ಭೂಮಿ ವಿಚಾರವಾಗಿ ಧಮ್ಕಿ ಹಾಕಿದ್ದರು. ಶ್ರೀನಿವಾಸ್ ಪುರ ಕೋಗಿಲು ಕ್ರಾಸ್ನಲ್ಲಿಯೇ ಧಮ್ಕಿ ಹಾಕಿದ್ದ ಎಂದು ಕಾಂಗ್ರೆಸ್ ನಾಯಕರಾದ ಕೆಜಿಎಫ್ ಬಾಬು ಅವರು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರ ಹತ್ರ ನಾಲ್ಕು ಜೊತೆ ಹೆಚ್ಚಗಿನ ಬಟ್ಟೆ ಇಲ್ಲ ಅಂತಹ ಮುಖ್ಯಮಂತ್ರಿ ವಿರುದ್ದ ಬ್ಲಾಕ್ ಮೇಲ್ ಗೆ ಇಳಿದಿದ್ದಾನೆ. ಪಬ್ಲಿಕ್ ಗೆ ಏನ್ ಒಳ್ಳೆಯದು ಮಾಡಿದ್ದಾನೆ ಈ ಮನುಷ್ಯ. ಅವನು ದುಬೈ ನಲ್ಲಿ ಆಸ್ತಿ ಮಾಡ್ತಾ ಇದ್ದಾನೆ. ಟಿಜೆ ಅಬ್ರಾಹಂ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇಮೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.

2008 ರಲ್ಲಿ ನಾನು ಬಿಡ್ನಲ್ಲಿ ಆಸ್ತಿ ತೆಗೆದುಕೊಂಡಿದ್ದೆ. 2012 ರಲ್ಲಿ ಇದು ನನ್ನ ವಶಕ್ಕೆ ಬಂದಿತ್ತು. ಒಟ್ಟು 7.5 ಎಕರೆ ಆಸ್ತಿ ವಿಚಾರವಾಗಿ ನನಗೆ ಬ್ಲಾಕ್ಮೇಲ್ ಮಾಡಿದ್ದರು. ಐದು ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಕೊಡದೇ ಇದ್ದಲ್ಲಿ ಈ ವಿಚಾರವಾಗಿ ಮೀಡಿಯಾ ಮುಂದೆ ಹೋಗ್ತಿನಿ ಎಂದಿದ್ದರು. ಅದಲ್ಲದೆ, ನಿಮ್ಮದು ಒಂದು ನೇಕೆಡ್ ವಿಡಿಯೋ ಇದೆ ಅದನ್ನು ರಿಲೀಸ್ ಮಾಡ್ತೀನಿ ಅಂತ ಬ್ಲಾಕ್ ಮೇಲ್ ಮಾಡಿದ್ದರು. ಯಾವುದಪ್ಪ ನನ್ನ ನೇಕೆಡ್ ಫೋಟೋ ಅಂತ ನನಗೆ ಭಯ ಆಗಿತ್ತು ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

ನಾನು ಚುನಾವಣೆಯ ಬ್ಯುಸಿಯಲ್ಲಿದ್ದೇನೆ. ನೀವು ಯಾರು ಅಂತ ಗೊತ್ತಿಲ್ಲ ನನಗೆ ತೊಂದರೆ ಕೊಡ ಬೇಡಿ ಅಂತ ಮನವಿ ಮಾಡಿದೆ. ಆದರೆ. ಅವರು ಅದನ್ನು ಕೇಳೋದಕ್ಕೆ ರೆಡಿ ಇರಲಿಲ್ಲ. ಐದು ಕೋಟಿ ಕೊಡಲಿಲ್ಲವಾದಲ್ಲಿ ನಿಮ್ಮ ಮರ್ಯಾದೆ ಕಳೆಯುತ್ತೇನೆ ಅಂತ ಬೆದರಿಕೆ ಹಾಕಿದ್ದರು. ಮೀಡಿಯಾಗಳ ಮುಂದೆ ಹೋಗಿ ನನಗೆ ಮರ್ಯಾದೆ ಕಳೆಯೋ ಕೆಲಸ ಮಾಡಿದ್ದರು. ಈ ತರಹದ ವ್ಯಕ್ತಿ ಸಿದ್ದರಾಮಯ್ಯ ಅಂತ ಉತ್ತಮ ರಾಜಕಾರಣಿ ಬಗ್ಗೆ ಮಾತನಾಡುತ್ತಾನೆ ಎಂದು ತಿಳಿಸಿದ್ದಾರೆ .

Leave a Reply

Your email address will not be published. Required fields are marked *