ಹೀರೋ ಹೊಸ ಹುಡುಗನೇ ಆಗಲಿ ಅಥವಾ ಸ್ಟಾರ್ ನಟನೇ ಆಗಲಿ, ಕಥೆಗೆ ಪ್ರಾಮುಖ್ಯತೆ ಕೊಟ್ಟು ಸಿನಿಮಾ ಮಾಡುವುದು ಸಿಂಪಲ್ ಸುನಿ ಶೈಲಿ. ‘ಚಮಕ್’, ‘ಆಪರೇಷನ್ ಅಲಮೇಲಮ್ಮ’, ‘ಒಂದು ಸರಳ ಪ್ರೇಮಕಥೆ’ ಮುಂತಾದ ಸಿನಿಮಾಗಳಲ್ಲಿ ಅವರು ಅದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಗತವೈಭವ’ ಸಿನಿಮಾ ಬಿಡುಗಡೆ ಆಗಿದೆ. ದೀಪಕ್ ತಿಮ್ಮಪ್ಪ ಮತ್ತು ಸುನಿ ಅವರು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಹೊಸ ಹೀರೋ ದುಷ್ಯಂತ್ ಅವರು ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ನವೆಂಬರ್ 14ರಂದು ತೆರೆಕಂಡ ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು ತಿಳಿಯಲು ಈ ವಿಮರ್ಶೆ ಓದಿ..
ಎಂದಿನಂತೆ ಈ ಬಾರಿ ‘ಗತವೈಭವ’ ಸಿನಿಮಾದಲ್ಲಿ ಕೂಡ ನಿರ್ದೇಶಕ ಸಿಂಪಲ್ ಸುನಿ ಅವರು ಕಥೆಗೆ ಮಹತ್ವ ನೀಡಿದ್ದಾರೆ. ಡಿಫರೆಂಟ್ ಏನೆಂದರೆ, ಈ ಸಿನಿಮಾದಲ್ಲಿ ಒಂದಲ್ಲ.. 4 ಕಥೆಗಳು ಇವೆ. ಪ್ರತಿ ಕಥೆ ಕೂಡ ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ನಾಲ್ಕೂ ಕಥೆಗಳು ಬೇರೆ ಬೇರೆ ಫ್ಲೇವರ್ನಲ್ಲಿ ಇವೆ. ಪುರಾಣದಿಂದ ಶುರುವಾಗುವ ಕಥೆ ಈಗಿನ ಮಾಡರ್ನ್ ಕಾಲಕ್ಕೆ ಬಂದು ನಿಲ್ಲುತ್ತದೆ. ಆ ಮೂಲಕ ಪ್ರೇಕ್ಷಕರಿಗೆ 4 ಡಿಫರೆಂಟ್ ಶೆಡ್ಗಳನ್ನು ಸಿಂಪಲ್ ಸುನಿ ಅವರು ಪರಿಚಯಿಸಿದ್ದಾರೆ.
ಪುರಾಣದಲ್ಲಿ ರಾಕ್ಷಸ ಕುಲದ ಯುವಕನಿಗೂ, ದೇವಕುಲದ ರಾಜಕುಮಾರಿಗೂ ಪ್ರೀತಿ ಮೂಡುತ್ತದೆ. ಆದರೆ ಶಾಪಕ್ಕೆ ಗುರಿಯಾಗಿ ಇಬ್ಬರೂ ಸಾಯುತ್ತಾರೆ. ಯಾವುದೇ ಜನ್ಮದಲ್ಲೂ ನೀವಿಬ್ಬರು ಒಂದಾಗಲೇ ಬಾರದು ಎಂಬುದೇ ಆ ಶಾಪ. ನಂತರದ ಜನ್ಮಗಳಲ್ಲೂ ಅವರಿಬ್ಬರು ಭೇಟಿ ಆಗುತ್ತಾರೆ. ಆದರೆ ಒಂದಾಗುತ್ತಾರಾ ಅಥವಾ ಇಲ್ಲವಾ? ಅವರ ಶಾಪ ವಿಮೋಚನೆ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ಸಿನಿಮಾ ನೋಡಿಯೇ ತಿಳಿದರೆ ಚೆನ್ನ.
ಪುನರ್ಜನ್ಮದ ಕಾನ್ಸೆಪ್ಟ್ ಇರುವ ಸಿನಿಮಾಗಳ ಸಾಲಿಗೆ ‘ಗತವೈಭವ’ ಹೊಸ ಸೇರ್ಪಡೆ. ಸಿಂಪಲ್ ಸುನಿ ಅವರು ತಮ್ಮದೇ ಫ್ಲೇವರ್ನಲ್ಲಿ ಈ ಸಿನಿಮಾ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ತೆಳು ಹಾಸ್ಯದಿಂದಲೇ ಅವರು ಕಥೆಯನ್ನು ನಿರೂಪಿಸಿದ್ದಾರೆ. ಬೇಕಾದ ಕಡೆಯಲ್ಲಿ ಸಾಕಷ್ಟು ಎಮೋಷನ್ ಕೂಡ ಬೆರೆಸಿದ್ದಾರೆ. ಜೊತೆಗೆ ಆ್ಯಕ್ಷನ್, ಸಸ್ಪೆನ್ಸ್ ಕೂಡ ಇದೆ. ಒಟ್ಟಿನಲ್ಲಿ ಮನರಂಜನೆಗೆ ಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸುನಿ ಅವರು ಈ ಸಿನಿಮಾ ಮಾಡಿದ್ದಾರೆ.
For More Updates Join our WhatsApp Group :
