ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತಿದ್ದಾಗಿ ಹೇಳಿದ್ದ ಆರೋಪಿ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ. ಸದ್ಯ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿರುವ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಚಿನ್ನಯ್ಯ ಕೋರ್ಟ್ ತೆಗೆದುಕೊಂಡು ಹೋಗಿದ್ದ ಮಾನವನ ತಲೆ ಬುರುಡೆ ಬಗ್ಗೆ ತನಿಖೆ ನಡೆಸಿದ್ದಾರೆ. ಬುರುಡೆ ಟೀಂ ಧರ್ಮಸ್ಥಳ ಗ್ರಾಮದ ಒಂದು ನಿಗೂಢ ಜಾಗದಲ್ಲಿ ತಲೆ ಬುರುಡೆಯನ್ನು ಹೂತು ಚಿನ್ನಯ್ಯಗೆ ಮಾಹಿತಿ ನೀಡಿತ್ತು. ಉತ್ಖನನದ ವೇಳೆ ಆ ಜಾಗವನ್ನು ತೋರಿಸುವ ಪ್ಲ್ಯಾನ್ ಕೂಡ ಮಾಡಲಾಗಿತ್ತು. ಇದರ ಬಗ್ಗೆಯೂ ಎಸ್ಐಟಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇನ್ನು, ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್ಗಾಗಿ ಶೋಧ ನಡೆಸಿದ್ದಾರೆ. ಚಿನ್ನಯ್ಯ ನ್ಯಾಯಾಲಯಕ್ಕೆ ತಲೆ ಬುರುಡೆ ತೆಗೆದುಕೊಂಡು ಹೋದಾಗಲೇ ಈತನ ಮೊಬೈಲ್ ಅನ್ನು ಬುರುಡೆ ಟೀಂ ಪಡೆದುಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೂ ಚಿನ್ನಯ್ಯ ಬಳಿ ವಕೀಲರಿಗೆ ಮಾತ್ರ ಮಾತನಾಡಲು ಅವಕಾಶ ಇತ್ತು. ಉಳಿದಂತೆ ಚಿನ್ನಯ್ಯ ಮೊಬೈಲ್ ಬಳಸಲು ಬುರುಡೆ ಟೀಂ ಬಿಡುತ್ತಿರಲಿಲ್ಲ.
ಎಸ್ಐಟಿ ವಿಚಾರಣೆ ವೇಳೆ ಆರೋಪಿ ಚಿನ್ನಯ್ಯ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದನು. ಆದರೆ, ಚಿನ್ನಯ್ಯನ ಬಳಿ ಮೊಬೈಲ್ ಇತ್ತು. ಸದ್ಯ ಆ ಮೊಬೈಲ್ ಬುರುಡೆ ಗ್ಯಾಂಗ್ನ ಬಳಿಯೇ ಇದೆ ಎಂದು ಎಸ್ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ. ಇದೀಗ, ಎಸ್ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನ ಮೊಬೈಲ್ ಅನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ಸದ್ಯ ಚಿನ್ನಯ್ಯನ ಮೊಬೈಲ್ ನಂಬರ್ ಆಧಾರದ ಮೇಲೆ ಎರಡು ವರ್ಷದ ಸಿಡಿಆರ್ ಸಂಗ್ರಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿನ್ನಯ್ಯ ಜತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿ ಚಿನ್ನಯ್ಯ ಯಾಱರ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದ, ಆತ ಎಲ್ಲೆಲ್ಲಿ ಕೆಲಸ ಮಾಡಿದ್ದ, ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
For More Updates Join our WhatsApp Group :