ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!;

ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್​​!;

ಬೆಳಿಗ್ಗೆ ಬ್ರೇಕ್ಫಾಸ್ಟ್‌ ಮತ್ತು ಸೂಕ್ತ ನಿದ್ದೆ—ದೈನಂದಿನ ಆರೋಗ್ಯಕ್ಕೆ ಅಗತ್ಯ

ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ನೆಲೆಸಿರುವ ಬಹುತೇಕರು ಉದ್ಯೋಗಸ್ಥರು. ಹೀಗಾಗಿ ಇಲ್ಲಿರುವ ಅನೇಕರಿಗೆ ಕೆಲಸ ಹೊರತುಪಡಿಸಿ ಯಾವುದಕ್ಕೂ ಟೈಮ್​​ ಸಿಗಲ್ಲ. ಆಫೀಸ್​​ ಟೈಂ ಹೊರತಾಗಿ ಟ್ರಾಫಿಕ್​​ ಸಮಸ್ಯೆಯ ಕಾರಣಕ್ಕೆ ಅಧಿಕ ಸಮಯವನ್ನು ಮಾರ್ಗದಲ್ಲೇ ಕಳೆಯಬೇಕಾದ ಸ್ಥಿತಿ ಹಲವರದ್ದು. ಹೀಗಾಗಿಯೇ ಕಡಿಮೆ ನಿದ್ದೆ, ಬೆಳಗ್ಗಿನ ಉಪಹಾರವನ್ನು ಸೇವಿಸದೇ ಇರೋದು ಅನೇಕರ ಜೀವನಶೈಲಿಯಾಗಿ ಹೋಗಿದೆ. ಆದರೆ ಇತ್ತೀಚಿನ ಅಂಕಿ ಅಂಶವೊಂದು ಇಂಥವರಿಗೆ ಎಚ್ಚರಿಕೆಯ ಗಂಟೆ ಎಂಬಂತಿದೆ.

ಕಡಿಮೆ ನಿದ್ದೆಯ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಆಫೀಸ್​​ಗಳತ್ತ ಮುಖಮಾಡುವವರ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಅದರಲ್ಲೂ ಯುವ ಜನತೆಯೇ ಇವರಲ್ಲಿ ಹೆಚ್ಚು ಎನ್ನುವುದು ಆಘಾತಕಾರಿ ವಿಷಯ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳುವವರ ಸಂಖ್ಯೆ ನಮ್ಮ ಮೆಟ್ರೋದಲ್ಲೇ 300ರ ಗಡಿ ದಾಟಿದೆ. ಇದು ಕಳೆದ ಮೂರು ತಿಂಗಳ ಅವಧಿಯ ಅಂಕಿ-ಅಂಶವಾಗಿದ್ದು, ಬಸ್​​ ಸೇರಿ ಇತರ ವಾಹನಗಳಲ್ಲಿ ಸಂಚರಿಸು ವೇಳೆ ನಡೆದ ಈ ರೀತಿಯ ಘಟನೆಗಳು ಅದೆಷ್ಟೋ.

ತಲೆಸುತ್ತು ಸಮಸ್ಯೆ ತಡೆಯುವುದು ಹೇಗೆ?

  • ಕಡಿಮೆ ನಿದ್ರೆ ಮಾಡೋದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೇಡ
  • ಪ್ರಯಾಣಕ್ಕೂ ಮುನ್ನ ಕಡ್ಡಾಯವಾಗಿ ಬ್ರೇಕ್​​ಫಾಸ್ಟ್​​ ಸೇವಿಸಿ
  • ಮನೆಯಿಂದ ಹೊರಡುವ ವೇಳೆಗ ಕನಿಷ್ಠ ಬಾಳೆಹಣ್ಣು, ಡ್ರೈಫೂಟ್ಸ್​​, ಕಾಳುಗಳನ್ನು ಸೇವಿಸಿ
  • ಉಸಿರುಗಟ್ಟಿಸುವಂತಹ ಉಡುಪಗಳನ್ನ ಸಾಧ್ಯವಾದಷ್ಟು ಧರಿಸಬೇಡಿ

ಇನ್ನು ನಿದ್ದೆಗೆಟ್ಟು ಖಾಲಿ ಹೊಟ್ಟೆಯಲ್ಲಿ ಆಫೀಸ್​​ಗಳಿಗೆ ತೆರಳುವ ಮಂದಿಗೆ ವೈದ್ಯರೂ ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿರುವ ನಿದ್ದೆ ಮತ್ತು ಬ್ರೇಕ್​​ಫಾಸ್ಟ್​​ ಸ್ಕಿಪ್​​ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರ ಜೊತೆಗೆ ನಿಂತುಕೊಂಡು ಪ್ರಯಾಣ ಮಾಡಿದರೆ ಆಯಾಸಗೊಂಡು, ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಕನಿಷ್ಠ 6 ಗಂಟೆಯಾದರೂ ನಿದ್ದೆಯ ಜೊತೆಗೆ ಸರಿಯಾದ ಸಮಯಕ್ಕೆ ಬೆಳಗ್ಗಿನ ಉಪಹಾರ ಸೇವಿಸುವಂತೆ ಡಾ. ದೇವಿಂದ್ರಪ್ಪ ಸಲಹೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *