ಬೆಂಗಳೂರು: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು ವಿಶೇಷ ಸೇವಿಂಗ್ಸ್ ಅಕೌಂಟ್ ಯೋಜನೆ ಆರಂಭಿಸಿದೆ. ಈ ಎಸ್ಐಬಿ ಹರ್ ಅಕೌಂಟ್ನಲ್ಲಿ ಮಹಿಳೆಯರಿಗೆ ನಾನಾ ರೀತಿಯ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು ನೀಡಲಾಗುತ್ತಿದೆ. ಭರ್ಜರಿ ಇನ್ಷೂರೆನ್ಸ್ನಿಂದ ಹಿಡಿದು ಅನ್ಲಿಮಿಟೆಡ್ ಎಟಿಎಂ ವಿತ್ಡ್ರಾವರೆಗೆ ಹಲವು ಫೀಚರ್ಗಳು ಮಹಿಳೆಯರ ಎಸ್ಐಬಿ HER ಅಕೌಂಟ್ನಲ್ಲಿ ಇವೆ.
ಸೌತ್ ಇಂಡಿಯನ್ ಬ್ಯಾಂಕ್ HER ಅಕೌಂಟ್ನಲ್ಲಿರುವ ಫೀಚರ್ಗಳು
- ಅಕೌಂಟ್ನಲ್ಲಿ ಒಂದು ಲಕ್ಷ ರೂ ಮೇಲ್ಪಟ್ಟ ಬ್ಯಾಲನ್ಸ್ ಇದ್ದರೆ ಆಟೊ ಸ್ವೀಪ್ ಸೌಲಭ್ಯ ಸಿಗುತ್ತದೆ.
- ಎಟಿಎಂಗಳಲ್ಲಿ ಶುಲ್ಕರಹಿತವಾಗಿ ಎಷ್ಟು ಬಾರಿ ಬೇಕಾದರೂ ಹಣ ವಿತ್ಡ್ರಾ ಮಾಡಬಹುದು.
- ಒಂದು ಕೋಟಿ ರೂ ಮೊತ್ತದ ವಿಮಾನ ಅಪಘಾತ ವಿಮೆ
- ವೈಯಕ್ತಿಕ ಅಪಘಾತಕ್ಕೆ 1 ಲಕ್ಷ ರೂ ವಿಮೆ
- ಕಡಿಮೆ ಪ್ರೀಮಿಯಮ್ಗೆ ಕ್ಯಾನ್ಸರ್ ಕೇರ್ ಇನ್ಷೂರೆನ್ಸ್
- ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
- ಉಚಿತವಾಗಿ ಮೂರು ಫ್ಯಾಮಿಲಿ ಅಕೌಂಟ್ ಸೇರಿಸುವ ಅವಕಾಶ
- ಲಾಕರ್ ರೆಂಟಲ್ನಲ್ಲಿ ಶೇ. 50ರಷ್ಟು ರಿಯಾಯಿತಿ
- ಏರ್ಪೋರ್ಟ್ ಲಾಂಜ್ ಸೌಲಭ್ಯ
ಏನಿದು ಆಟೊ ಸ್ವೀಪ್ ಫೆಸಿಲಿಟಿ?
ಬ್ಯಾಂಕ್ನಲ್ಲಿ ಆಟೊ ಸ್ವೀಪ್ ಫೆಸಿಲಿಟಿಯಲ್ಲಿ (Auto Sweep facility) ಸೇವಿಂಗ್ಸ್ ಅಕೌಂಟ್ ಮತ್ತು ಎಫ್ಡಿ ಹಣದ ತಾಳಮೇಳ ಇರುತ್ತದೆ. ಇದರಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ಫಿಕ್ಸೆಡ್ ಡೆಪಾಸಿಟ್ ಅಕೌಂಟ್ಗೆ ಲಿಂಕ್ ಮಾಡಲಾಗಿರುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹಣವು ಎಸ್ಬಿ ಅಕೌಂಟ್ನಲ್ಲಿ ಇದ್ದರೆ ಅದನ್ನು ಎಫ್ಡಿಗೆ ಆಟೊಮ್ಯಾಟಿಕ್ ಆಗಿ ವರ್ಗಾಯಿಸಲಾಗುತ್ತದೆ.
ಹಾಗೆಯೆ, ಎಸ್ಬಿ ಅಕೌಂಟ್ನಲ್ಲಿ ಬ್ಯಾಲನ್ಸ್ ನಿಗದಿತ ಮಿತಿಗಿಂತ ಕಡಿಮೆಗೆ ಬಂದರೆ, ಅಷ್ಟು ಹಣವನ್ನು ಎಫ್ಡಿಯಿಂದ ಇಲ್ಲಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲು ಸಾಧ್ಯವಾಗುತ್ತದೆ.
ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಮಂತ್ಲಿ ಬ್ಯಾಲನ್ಸ್ನಲ್ಲಿ ವಿನಾಯಿತಿ…
ಸೌತ್ ಇಂಡಿಯನ್ ಬ್ಯಾಂಕ್ನ HER ಅಕೌಂಟ್ನಲ್ಲಿ 50,000 ರೂ ಮಾಸಿಕ ಬ್ಯಾಲನ್ಸ್ ಇರಬೇಕೆಂಬ ನಿಯಮ ಇದೆ. ಆದರೆ, ಗ್ರಾಹಕರು ಒಂದು ಲಕ್ಷ ರೂ ಅನ್ನು ಫಿಕ್ಸೆಡ್ ಡೆಪಾಸಿಟ್ಗೆ ಇಟ್ಟರೆ, ಮಂತ್ಲಿ ಬ್ಯಾಲನ್ಸ್ ಎಷ್ಟಿದ್ದರೂ ಚಿಂತೆ ಪಡಬೇಕಿಲ್ಲ. ಅಥವಾ ಹಿಂದಿನ ತಿಂಗಳಲ್ಲಿ ಈ ಅಕೌಂಟ್ನ ಡೆಬಿಡ್ ಕಾರ್ಡ್ನಿಂದ 50,000 ರೂ ವ್ಯಯಿಸಿದ್ದರೂ ಈ ತಿಂಗಳು 50,000 ರೂ ಮಾಸಿಕ ಬ್ಯಾಲನ್ಸ್ ಕಾಯ್ದುಕೊಳ್ಳುವ ಅಗತ್ಯ ಇರುವುದಿಲ್ಲ.
ಎಸ್ಐಬಿಯ ಬೇರೆ ಸಾಮಾನ್ಯ ಅಕೌಂಟ್ಗಳಲ್ಲಿ ಕನಿಷ್ಠ ಬ್ಯಾಲನ್ಸ್ 5,000 ರೂವರೆಗೂ ಇದೆ.
For More Updates Join our WhatsApp Group :




