ಬೀದರ್: ಬೆಳಗಿನ ನಿಶ್ಶಬ್ದತೆಯನ್ನು ಕದಿದ ಭೀಕರ ಅಪಘಾತ ಬೀದರಿನ ಕುಂಬಾರವಾಡ ಬಡಾವಣೆಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬಲವಾಗಿ ಗುದ್ದಿದ್ದು, ಪರಿಣಾಮವಾಗಿ ಆ ವ್ಯಕ್ತಿಯ ದೇಹ ಸುಮಾರು 50 ಅಡಿ ದೂರಕ್ಕೆ ಎಸೆದಿದೆ. ಈ ದುರ್ಘಟನೆಯಲ್ಲಿ 76 ವರ್ಷದ ಭೀಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬೆಳಗ್ಗೆ 5:30ರ ಸುಮಾರಿಗೆ ನಡೆದಿದ್ದು, ಆ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕಾರಿನ ವೇಗ ಹಾಗೂ ಡಿಕ್ಕಿಯ ರಭಸ ನೋಡುವಂತೆಯೇ ನಡುಗುವಂತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ನಂತರ ಕಾರು ಚಾಲಕ ಪರಾರಿಯಾಯ್ತು
ಡಿಕ್ಕಿ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ವಾಹನದ ನಂಬರ್ ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.ಸ್ಥಳೀಯರು ಬೆಳಗಿನ ಸಮಯದಲ್ಲಿ ವಾಹನಗಳ ವೇಗದ ನಿಯಂತ್ರಣಕ್ಕಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
For More Updates Join our WhatsApp Group :
