ವಿಡಿಯೋ ಗೇಮ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ SS Rajamouli

ವಿಡಿಯೋ ಗೇಮ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ SS Rajamouli

ಎಸ್ಎಸ್ ರಾಜಮೌಳಿ ತಂತ್ರಜ್ಞಾನದ ಬಗ್ಗೆ ವಿಪರೀತ ಕುತೂಹಲ, ನಂಬಿಕೆ ಹೊಂದಿದ್ದಾರೆ. ತಮ್ಮ ಸಿನಿಮಾಗಳಲ್ಲಿಯೂ ಸಹ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಾರೆ. ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ, ಎಸ್ಎಸ್ ರಾಜಮೌಳಿ ವಿಡಿಯೋ ಗೇಮ್ ಕ್ಷೇತ್ರಕ್ಕೆ ನುಗ್ಗಿದ್ದಾರೆ. ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಒಂದರಲ್ಲಿ ರಾಜಮೌಳಿ ಮತ್ತು ಅವರ ಪುತ್ರ ಕಾಣಿಸಿಕೊಂಡಿದ್ದಾರೆ.

ರಾಜಮೌಳಿ, ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ‘ಆರ್ಆರ್ಆರ್’ ಸಿನಿಮಾ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಆ ಸಿನಿಮಾದ ಬಳಿಕ ಹಾಲಿವುಡ್ನ ದಿಗ್ಗಜ ನಿರ್ದೇಶಕರಾದ ಜೇಮ್ಸ್ ಕ್ಯಾಮರನ್, ಸ್ಟೀಫನ್ ಸ್ಪೀಲ್ಬರ್ಗ್ ಅಂಥಹವರೇ ರಾಜಮೌಳಿಯನ್ನು ಹಾಲಿವುಡ್ಗೆ ಆಹ್ವಾನಿಸಿದ್ದಾರೆ. ಕೆಲ ದೊಡ್ಡ ನಿರ್ಮಾಣ ಸಂಸ್ಥೆಗಳು ಸಹ ರಾಜಮೌಳಿ ಜೊತೆ ಕೆಲಸ ಮಾಡಲು ಮುಂದೆ ಬಂದಿದ್ದವು. ಆದರೆ ರಾಜಮೌಳಿ ಎಲ್ಲವನ್ನೂ ನಿರಾಕರಿಸಿ, ಇದೀಗ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಅತ್ಯುತ್ತಮ ಸಿನಿಮಾ ನಿರ್ದೇಶಕ ಆಗಿರುವ ರಾಜಮೌಳಿ, ಇದೀಗ ವಿಡಿಯೋ ಗೇಮ್ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ರಾಜಮೌಳಿ, ವಿಡಿಯೋ ಗೇಮ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಡೆತ್ ಸ್ಟ್ರಾಡಿಂಗ್ ಎಂಬುದು ಜನಪ್ರಿಯ ವಿಡಿಯೋ ಗೇಮ್ ಇದೀಗ ಇದರ ಎರಡನೇ ಆವೃತ್ತಿ ‘ಡೆತ್ ಸ್ಟ್ರಾಡಿಂಗ್: ಆನ್ ದಿ ಬೀಚ್’ನಲ್ಲಿ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಈ ಗೇಮ್ನ ಮುಖ್ಯ ಪಾತ್ರ ಅಲ್ಲ ಬದಲಿಗೆ ಅತಿಥಿ ಪಾತ್ರದಲ್ಲಿ ಮಾತ್ರವೇ ರಾಜಮೌಳಿ ಕಾಣಿಸಿಕೊಂಡಿದ್ದು, ಡೆತ್ ಸ್ಟ್ರಾಡಿಂಗ್ 2ನಲ್ಲಿ ಒಂದು ವಿಶೇಷ ಆಪರೇಷನ್ನಲ್ಲಿ ರಾಜಮೌಳಿ ಮುಖ್ಯ ಆಟಗಾರನಿಗೆ ಸಹಾಯ ಮತ್ತು ಸುಳಿವುಗಳನ್ನು ನೀಡುತ್ತಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *