ಬೆಂಗಳೂರು: ನಗರದ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನೆರವೇರಿತು.
ಆ ಮೂಲಕ ವೃಕ್ಷಮಾತೆ ಮಣ್ಣಲ್ಲಿ ಮಣ್ಣಾದರು. ಸಾಹಿತಿ ಡಾ.ಸಿದ್ದಲಿಂಗಯ್ಯನವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಪೊಲೀಸರು 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು. ತಿಮ್ಮಕ್ಕನವರ ಪುತ್ರ ಉಮೇಶ್ಗೆ ಗೃಹಸಚಿವ ಡಾ.ಪರಮೇಶ್ವರ್ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು.
For More Updates Join our WhatsApp Group :
