ಮಂಡ್ಯ: ಶಾಂತಿಯುತವಾಗಿ ಸಾಗಬೇಕಿದ್ದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಂಡ್ಯದ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದಿದ್ದು, ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳ ಈ ದುಷ್ಕೃತ್ಯವನ್ನು ಸ್ಥಳೀಯರು ಪ್ರೀ ಪ್ಲಾನ್ ಮಾಡಿದ ದಾಳಿ ಎಂದು ಆರೋಪಿಸಿದ್ದರೆ, ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಇದೇ ಮಾತು ಒಪ್ಪಿಕೊಂಡಿದ್ದಾರೆ.
*ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು –“ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಶಾಂತಿ ಕಾಪಾಡುವ ಜವಾಬ್ದಾರಿ ಹೊಂದಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ,” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯನ ಪ್ರತಿಕ್ರಿಯೆ:ಮದ್ದೂರಿನಲ್ಲಿ ನಡೆದ ಗಲಾಟೆ ಕುರಿತು ಮಾತನಾಡಿದ ಸಿಎಂ, “ಮಸೀದಿ ಮುಂದೆ ಮೆರವಣಿಗೆ ಹಾದುಹೋಗುವಾಗ ಅಹಿತಕರ ಘಟನೆ ನಡೆದಿದೆ. ಗುಂಪು ಕಟ್ಟಿಕೊಂಡು ಕಲ್ಲು ತೂರಾಟ ಮಾಡಲಾಗಿದೆ. ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಲಾಗಿದೆ. ಹಿಂದೂ ಆಗಲಿ, ಮುಸ್ಲಿಂ ಆಗಲಿ ತಪ್ಪು ಮಾಡಿದವರ ವಿರುದ್ಧ ಸಮಾನ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸ್ಪಷ್ಟಪಡಿಸಿದರು.
ಮದ್ದೂರು ಪ್ರಕರಣ ಈಗ ರಾಜಕೀಯ ಬಿಸಿ ವಿಚಾರವಾಗಿ ಪರಿಣಮಿಸಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಆರೋಪ–ಪ್ರತ್ಯಾರೋಪ ಜೋರಾಗಿದೆ.
For More Updates Join our WhatsApp Group :