ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್ಗೆ 11 ರೂ ದರ ಹೆಚ್ಚಳ.
ನವದೆಹಲಿ: ಹೊಸ ವರ್ಷದ ಮೊದಲ ದಿನದಂದು ಸಾಮಾನ್ಯ ಜನರಿಗೆ ಡಬಲ್ ಶಾಕ್ ಸಿಕ್ಕಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 19 ರೂ ಏರಿಕೆಯಾದರೆ, ಪ್ರೀಮಿಯಮ್ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲೂ ಭರ್ಜರಿ ಹೆಚ್ಚಳ ಆಗಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆ ಲೀಟರ್ಗೆ 11 ರೂನಷ್ಟು ಹೆಚ್ಚಿದೆ. ಪ್ರೀಮಿಯಮ್ ಡೀಸಲ್ ಬೆಲೆಯಲ್ಲಿ ಒಂದೂವರೆ ರೂನಷ್ಟು ಅಲ್ಪ ಹೆಚ್ಚಳ ಆಗಿದೆ. ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಈ ದರ ಏರಿಕೆ ಮಾಡಿವೆ. ಕಳೆದ ತಿಂಗಳು ಕೂಡ ಪ್ರೀಮಿಯಮ್ ಇಂಧನ ಬೆಲೆಗಳಲ್ಲಿ ಏರಿಕೆ ಮಾಡಲಾಗಿತ್ತು.
ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಸಂಸ್ಥೆಯಾದ ಇಂಡಿಯನ್ ಆಯಿಲ್ ತನ್ನ ಪ್ರೀಮಿಯಮ್ ದರ್ಜೆಯ ಎಕ್ಸ್ಪಿ100 ಪೆಟ್ರೋಲ್ ಬೆಲೆಯನ್ನು 160 ರೂ ಹೆಚ್ಚಿಸಿದೆ. 149 ರೂ ಇದ್ದ ಇದರ ಬೆಲೆಯಲ್ಲಿ 11 ರೂ ಏರಿಕೆ ಆಗಿದೆ. ಈ ಎಕ್ಸ್ಪಿ100 ಭಾರತದ ಮೊದಲ 100 ಆಕ್ಟೇನ್ ಪ್ರೀಮಿಯಮ್ ಪೆಟ್ರೋಲ್ ಎನಿಸಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯ ಪವರ್100 ಪೆಟ್ರೋಲ್ ದರವೂ ಏರಿಕೆ ಆಗಿರುವುದು ತಿಳಿದುಬಂದಿದೆ. ಈ ಪ್ರೀಮಿಯಮ್ ಪೆಟ್ರೋಲ್ ಅನ್ನು ಅಧಿಕ ಎಂಜಿನ್ ಕಾರ್ಯಕ್ಷಮತೆ ಅಗತ್ಯ ಇರುವ ಲಕ್ಷುರಿ ಕಾರು, ಸ್ಪೋರ್ಟ್ಸ್ ಬೈಕ್ಗಳಲ್ಲಿ ಬಳಸಲಾಗುತ್ತದೆ.
ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಏರಿಕೆ
ಇನ್ನು, ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಹೆಚ್ಚಳ ಆಗಿದೆ. ಇಂಡಿಯನ್ ಆಯಿಲ್ನ ಎಕ್ಸ್ಟ್ರಾ ಗ್ರೀನ್ ಪ್ರೀಮಿಯಮ್ ಡೀಸಲ್ನ ರೀಟೇಲ್ ಬೆಲೆ ಒಂದು ಲೀಟರ್ಗೆ 91.49 ರೂನಿಂದ 92.99 ರೂಗೆ ಏರಿದೆ.
ಇದೇ ವೇಳೆ ಇವತ್ತು 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 195 ರೂನಷ್ಟು ಏರಿಕೆ ಆಗಿದೆ. ಮಾರ್ಚ್ ತಿಂಗಳಿಂದೀಚೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 300 ರೂ ಹೆಚ್ಚಳ ಆದಂತಾಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ ತಿಂಗಳು ಒಮ್ಮೆ ಏರಿಕೆ ಆಗಿದೆ.
For More Updates Join our WhatsApp Group :




