ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸೋಮವಾರ ಹಕ್ಕು ಚ್ಯುತಿ ಮಂಡನೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಪಕ್ಷ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಜುಲೈ 19ರಂದು ನಾನು ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ನಾನು ಮಾತನಾಡದಂತೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ನೀಡಬೇಕು ಎಂದು ಪ್ರದೀಪ್ ಈಶ್ವರ್ ಮನವಿ ಮಾಡಿದ್ದರು. ಹೀಗಾಗಿ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ ಯು.ಟಿ. ಖಾದರ್ ಅನುಮತಿ ನೀಡಿದರು.
ಆರ್.ಆಶೋಕ್ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿ ಮಾತನಾಡಿದ ಪ್ರದೀಪ್ ಈಶ್ವರ್, ಮೊದಲ ಬಾರಿ ಶಾಸಕರಾದಾಗ ಖುಷಿ ಪಡಲು ಆರ್. ಆಶೋಕ್ ಅವರ ತಂದೆ-ತಾಯಿ ಇದ್ದರು. ಆದರೆ, ನಾನು ಶಾಸಕನಾದಾಗ ಖುಷಿ ಪಡಲು ನನ್ನ ತಂದೆ-ತಾಯಿ ಇರಲಿಲ್ಲ. ನಾನು ತಂದೆ-ತಾಯಿ ಕಳೆದುಕೊಂಡು ಪೇರೆಸಂದ್ರ ಗ್ರಾಮದಲ್ಲಿ ಕೂಲಿ ಮಾಡಿದ್ದೇನೆ, ತೋಟಕ್ಕೆ ನೀರು ಹರಿಸಿದ್ದೇನೆ. ಶಾಸಕನಾದ ಬಳಿಕ ಜನರಿಗೆ ಅನುಕೂಲವಾಗಲು 10 ಉಚಿತ ಆಂಬ್ಯುಲೆನ್ಸ್ ನೀಡಿದ್ದೇನೆ. ಅನೇಕ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಆರ್. ಆಶೋಕ್ ಅಣ್ಣಾನ ಬಗ್ಗೆ ನನಗೆ ಗೌರವ ಇದೆ, ಅವರು ಮಾತುಗಳ ಬಗ್ಗೆ ನನಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ವೇಳೆ ಮಾತನಾಡಿದ ಆರ್. ಆಶೋಕ್ ಅವರು, ನಾನು ಯಾವುದೇ ತಪ್ಪು ಪದ ಬಳಕೆ ಮಾಡಿಲ್ಲ. ದಾಖಲೆ ತೆಗೆದು ನೋಡಿದರೆ ಗೊತ್ತಾಗುತ್ತದೆ. ಒಂದು ವೇಳೆ ಅವರ ಪ್ರಕಾರ ತಪ್ಪು ಮಾಡಿದ್ದೇನೆಂದು ಎನಿಸಿದರೆ ಪರಿಶೀಲನೆ ಮಾಡಲಿ, ಅವರು ಬೇರೆ ಬೇರೆ ಭಾಷೆ ಬಳಸಿದ್ದಾರೆ. ಅದರ ಬಗ್ಗೆ ನಾವು ಚಕಾರ ಎತ್ತಿಲ್ಲ. ಪರಿಶೀಲನೆ ಮಾಡಿ ದಾಖಲೆಯಲ್ಲಿ ಇದ್ದರೆ ತೆಗೆದು ಹಾಕಿ, ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು.
ಇಬ್ಬರು ಸದಸ್ಯರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸ್ಪೀಕರ್ ಖಾದರ್ ಅವರು, ಪ್ರದೀಪ್ ಈಶ್ವರ್ ಅವರು ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಅಶೋಕ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನಾನು ಕಲಾಪದ ವಿಡಿಯೊ ತರಿಸಿಕೊಂಡು ಪರಿಶೀಲನೆ ಮಾಡಿ, ಮುಂದಿನಕ್ರಮಕೈಗೊಳ್ಳಲಾಗಿವುದುಎಂದುತಿಳಿಸಿದರು.