ಜೆ.ಪಿ. ತುಮಿನಾಡು ನಿರ್ದೇಶನದ ‘ಸು ಫ್ರಮ್ ಸೋ ಸಿನಿಮಾ ಸೂಪರ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ, ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಆ ಚಿತ್ರತಂಡವನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅವರ ಯಶಸ್ಸಿಗೆ ಮೆಚ್ಚುಗೆ ಸೂಚಿಸಲು ಹೋಗಿದ್ದೆ. ಸಿನಿಮಾ ಮಾಡುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ”ಎಂದು ಸ್ಪಷ್ಟಪಡಿಸಿದರು.
ಚಿತ್ರರಂಗಕ್ಕೆ ಬೇಕಾದಂತಹ ಸಿನಿಮಾಗಳ ಯಶಸ್ಸು ಸುದೀಪ್ ಹೇಳಿದರು -‘ಸು ಫ್ರಮ್ ಸೋ’ ಚಿತ್ರದ ಗೆಲುವು ತುಂಬಾ ಬ್ಯೂಟಿಫುಲ್. ನಮ್ಮ ಚಿತ್ರರಂಗದಲ್ಲಿ ಈ ರೀತಿ ಸಿನಿಮಾಗಳು ಯಶಸ್ವಿಯಾಗುತ್ತಿರಬೇಕು. ಕೆಲವರು ‘ಹೀರೋಗಳೇ ಇಲ್ಲ, ಸಿನಿಮಾ ಓಡುವುದೇ ಇಲ್ಲ’ ಎನ್ನುತ್ತಾರೆ. ಆದರೆ, ನಮ್ಮ ಬಳಿ ರಿಷಬ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ, ದುನಿಯಾ ವಿಜಿ, ಶಿವಣ್ಣ, ಉಪೇಂದ್ರ, ರಕ್ಷಿತ್ ಶೆಟ್ಟಿ, ಯಶ್ – ಎಲ್ಲರೂ ಇದ್ದಾರೆ. ಹೀಗಾಗಿ ಈ ಮಾತು ತಪ್ಪು.”
ಹೊಸಬರಿಗೆ ಭರವಸೆ- ‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸು ಹೊಸಬರಿಗೆ ಧೈರ್ಯ ತುಂಬಿದೆ. ಚಿತ್ರರಂಗ ಮುಚ್ಚಿಹೋಗುತ್ತೆ ಎನ್ನುವ ಮಾತುಗಳಿಗೆ ಇದು ದೊಡ್ಡ ಉತ್ತರ. ಇಂತಹ ಭರವಸೆಯೇ ನಮ್ಮ ಚಿತ್ರರಂಗಕ್ಕೆ ಬೇಕಾಗಿದೆ” ಎಂದು ಸುದೀಪ್ ಹೇಳಿದರು.
ಜೆ.ಪಿ. ತುಮಿನಾಡು ಜೊತೆಗಿನ ಭೇಟಿ
“ಅವರೊಂದಿಗೆ ನಾನು ಹಳೆಯ ಪರಿಚಯ ಹೊಂದಿದ್ದೇನೆ. ಒಂದು ತುಳು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಅದನ್ನು ಅವರು ಈಗ ನೆನಪಿಸಿದರು.”“ಆದರೆ, ಈಗ ಅವರ ಸಿನಿಮಾ ಹಿಟ್ ಆಗಿದೆ ಎಂದು ಅವರನ್ನು ಕರೆದು ‘ನನಗೆ ಸಿನಿಮಾ ಮಾಡಿ’ ಎಂದರೆ ಅದು ಸ್ವಾರ್ಥ ಆಗುತ್ತದೆ. ನಾನು ಕೇವಲ ಅಭಿನಂದನೆ ಸಲ್ಲಿಸಿದ್ದೇನೆ.” “ನಾಳೆ ಅವರು ಒಳ್ಳೆಯ ಕಥೆ ತೆಗೆದುಕೊಂಡು ಬಂದರೆ ಖಂಡಿತಾ ಕೇಳುತ್ತೇನೆ. ಆದರೆ ಈಗ ಯಾವುದೇ ಸಿನಿಮಾ ಪ್ಲ್ಯಾನ್ ಇಲ್ಲ” ಎಂದು ಸುದೀಪ್ ಹೇಳಿದ್ದಾರೆ.
For More Updates Join our WhatsApp Group :
