ಬೆಂಗಳೂರು: ಇಂದು ಸೈಬರ್ ವಂಚಕರು ಯಾರನ್ನಾದರೂ ಬೇಟೆಯಾಗಿಸಲು ಹಿಂದೆ ಮುಂದಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿರುವ ವಂಚಕರು ಈ ಬಾರಿ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರತ್ತ ಕೈಚಾಚಿದ್ದರು. ಆದರೆ ಅವರ ಚುರುಕುಮಾತಿನಿಂದಾಗಿ ವಂಚಕರು ಕೈಚೆಲ್ಲಿದ್ದಾರೆ.
ಅಶ್ಲೀಲ ವಿಡಿಯೋ ದಂಡನೆ ಬೆದರಿಕೆ: ಮಾಯಾಜಾಲ
ಸೆಪ್ಟೆಂಬರ್ 5 ರಂದು, “ದೂರ ಸಂಪರ್ಕ ಸಚಿವಾಲಯದ ಅಧಿಕಾರಿ” ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆ ಮಾಡಿ,
“ನಿಮ್ಮ ನಂಬರ್ ಆಧಾರ್ಗೆ ಲಿಂಕ್ ಆಗಿಲ್ಲ, ನಿಮ್ಮ ನಂಬರ್‌ನಿಂದ ಅಶ್ಲೀಲ ವಿಡಿಯೋ ಕಳಿಸಲಾಗಿದೆ, ಅದನ್ನು ನಿಲ್ಲಿಸಿದ್ದೇನೆ” ಎಂದು ಭಯ ಹಾಕಲು ಯತ್ನಿಸಿದ.
ಈ ಮಾತುಗಳಿಂದ ಅನುಮಾನಗೊಂಡ ಸುಧಾಮೂರ್ತಿ, ತಕ್ಷಣವೇ ಟ್ರೂಕಾಲರ್ ಬಳಸಿಕೊಂಡು ನಂಬರ್ ಪರಿಶೀಲಿಸಿದರು – ಟ್ರೂಕಾಲರ್‌ನಲ್ಲಿ ‘Telecom Department’ ಎಂಬ ಹೆಸರು ಕಂಡುಬಂದರೂ, ಅವರು ತಕ್ಷಣವೇ ಎಚ್ಚರಿಕೆ ವಹಿಸಿ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಹಣ ಕಳೆದುಕೊಳ್ಳದೇ ಬುದ್ಧಿವಂತ ನಿರ್ಧಾರ
ಸುಧಾಮೂರ್ತಿ ಅವರು ಯಾವುದೇ ವೈಯಕ್ತಿಕ ಮಾಹಿತಿ ನೀಡದೇ, ಯಾವುದೇ ಹಣವನ್ನೂ ವರ್ಗಾಯಿಸದೇ, ತಪ್ಪು ಮಾಡದೇ ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಈ ಕೃತ್ಯದಿಂದಾಗಿ ವಂಚಕರು ಕೈಚೆಲ್ಲಿದ್ರು, ಸೈಬರ್ ಕ್ರೈಂ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜನತೆಗೆ ಎಚ್ಚರಿಕೆ: ಇಂಥಾ ಕಪಟ ಕರೆಗಳು ಕೇಳಿದ್ರೆ ಏನು ಮಾಡಬೇಕು?
- ದೂರವಾಣಿ ಕರೆ ಮೂಲಕ ಸ್ವಯಂವನ್ನು ಇಡಿ, ಸಿಬಿಐ, ದೂರಸಂಪರ್ಕ ಇಲಾಖೆ ಅಥವಾ ಯಾವುದೇ ಸರ್ಕಾರದ ಅಧಿಕಾರಿಯೆಂದು ಪರಿಚಯಿಸೋ ವ್ಯಕ್ತಿಗಳಿಂದ ಎಚ್ಚರಿಕೆಯಿಂದಿರಿ.
- ಅವರು ಕೇಳಿದ ವೈಯಕ್ತಿಕ ಮಾಹಿತಿ ಒದಗಿಸಬೇಡಿ.
- ವಂಚಕರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಬೇಡಿ.
- ಮೋಸವಾಗಿದ್ದರೆ ತಕ್ಷಣವೇ ಹೊರಗಿನ ಯಾವುದೇ ಆಪ್ ಅಥವಾ ಗೂಗಲ್ ಸಹಾಯವಿಲ್ಲದೆ ನೇರವಾಗಿ ಪೋಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ಗೆ ದೂರು ನೀಡಿ.
For More Updates Join our WhatsApp Group :




