ಇಂದು ಅನೇಕ ಮಂದಿ ಕಾಲು, ಕೀಲು ಮತ್ತು ಅನೇಕ ರೀತಿಯ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನೋವು ಉಪಶಮನಕ್ಕೆ ನೋವು ನಿವಾರಕಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ, ಇವುಗಳ ನಿರಂತರ ಬಳಕೆ ಭವಿಷ್ಯದಲ್ಲಿ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತದೆ. ಈ ರೀತಿಯ ನೋವುಗಳಿಗೆ ಮನೆಯಲ್ಲಿ ಸುಲಭವಾಗಿ ಲಭ್ಯವಾಗುವ ಶುಂಠಿ ಪರಿಹಾರವಾಗಲಿದೆ ಎನ್ನುತ್ತಾರೆ ತಜ್ಞರು.
ಶುಂಠಿಯಲ್ಲಿ ಔಷಧೀಯ ಗುಣಗಳಿದ್ದು, ಇದು ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ. ಇದರಲ್ಲಿನ ಉರಿಯೂತ ಗುಣವೂ ನೋವಿನ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖವಾಗಿದೆ. ಇದು ಅಸ್ಥಿಸಂಧಿವಾತ, ಸ್ನಾಯು ನೋವು, ಋತುಚಕ್ರದ ಸಮಸ್ಯೆ ತಗ್ಗಿಸುವಲ್ಲಿ ಸಹಾಯಕಾರಿಯಾಗಿದೆ. ಶುಂಠಿಯಲ್ಲಿ ಮೆಗ್ನಿಶಿಯಂ, ಮ್ಯಾಗನೀಸ್, ತಾಮ್ರ ಮತ್ತು ವಿಟಮಿನ್ ಬಿ6 ಗುಣಗಳಿದ್ದು, ಕೀಲಿನ ಆರೋಗ್ಯಕ್ಕೆ ಅವಶ್ಯವಾಗಿದೆ. ಪ್ರತಿನಿತ್ಯ ಶುಂಠಿ ಆಹಾರ ಸೇವನೆಯಿಂದ ಕೀಲು ಮತ್ತು ಅಸ್ಥಿಸಂಧಿವಾತದ ಸಮಸ್ಯೆಯನ್ನು ತಗ್ಗಿಸಬಹುದಾಗಿದೆ.
2001ರಲ್ಲಿ ಪ್ರಕಟವಾಗಿರುವ ರುಮೊಟಾಲೊಜಿ ಅಧ್ಯಯನ ಪ್ರಕಾರ, ಅಸ್ಥಿಸಂಧಿವಾತ ಹೊಂದಿರುವವರಿಗೆ ನಾಲ್ಕುವಾರಗಳ ಕಾಲ ಪ್ರತಿನಿತ್ಯ 2 ಗ್ರಾಂ ಶುಂಠಿ ನೀಡುವುದರಿಂದ ಅವರಲ್ಲಿ ನೋವು ತಗ್ಗಿದೆ. ಜೊತೆಗೆ ಕೀಲಿನ ಕಾರ್ಯಾಚರಣೆ ಕೂಡ ಸುಧಾರಣೆ ಕಂಡಿದೆ ಎಂದಿದ್ದಾರೆ. ಈ ಅಧ್ಯಯನದಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ್ ಕನೆಕ್ಟಿಕಟ್ ಸ್ಕೂಲ್ ಆಫ್ ಮೆಡಿಸಿನ್ನ ಪ್ರೊ ಡಾ ಡೇವಿಡ್ ಇ ಭಾಗಿಯಾಗಿದ್ದರು. ಇವರು ಕೀಲು ನೋವನ್ನು ತಗ್ಗಿಸುವಲ್ಲಿ ಶುಂಠಿಯ ಔಷಧಿಯ ಗುಣ ಭಾರಿ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ಶುಂಠಿ ಜೊತೆಗೆ ಅರಿಶಿಣ: ನಿತ್ಯ ಬೆಳಗ್ಗೆ ಶುಂಠಿ ಟೀ ಅಥವಾ ಬಿಸಿ ನೀರಿಗೆ ಶುಂಠಿ ಮತ್ತು ಅರಿಶಿಣ ಬೆರಸಿ ಕುಡಿಯುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ಇದು ನೋವು ತಗ್ಗಿಸುವ ಜೊತೆಗೆ ಕೆಮ್ಮು ಮತ್ತು ಶೀತಕ್ಕೆ ಕೂಡ ಉಪಯುಕ್ತವಾಗಲಿದೆ. ಶುಂಠಿಯು ಅನೇಕ ಮಾತ್ರೆ ಮತ್ತು ಕ್ರೀಂಗಿಂತ ಹೆಚ್ಚಿನ ಪ್ರಯೋಜನ ಹೊಂದಿದ್ದು, ಹಲವು ಆರೋಗ್ಯ ಗುಣ ಇದರಲ್ಲಿದೆ.
ಕೊಲೆಸ್ಟ್ರಾಲ್ ಇಳಿಕೆ: ಶುಂಠಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ: ಕ್ಯಾನ್ಸರ್ಗೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕೊಲೆಕ್ಟರ್ ವಿರೋಧಿ ಮತ್ತು ಆ್ಯಂಟಿ ಲಿವರ್ ಕ್ಯಾನ್ಸರ್ ವಿರೋಧಿ ಗುಣವಿದೆ. ಶುಂಠಿಯನ್ನು ಬಳಕೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನೂ ತಗ್ಗಿಸಬಹುದು.
ಜೀರ್ಣಕ್ರಿಯೆ ಸಮಸ್ಯೆ: ಅಜೀರ್ಣ, ಹೊಟ್ಟೆ ನೋವು, ತಲೆ ಸುತ್ತುವಿಕೆಯಂತಹ ಸಮಸ್ಯೆಗೆ ಇದು ಪರಿಣಾಮಕಾರಿಯಾಗಿದೆ. ಇಂತಹ ಸಮದರ್ಭದಲ್ಲಿ ಶುಂಠಿ ಟೀ ಕುಡಿಯುವುದು ಉತ್ತಮ. ಶುಂಠಿ ಸಾಮಾನ್ಯವಾಗಿ ಒತ್ತಡ ಮತ್ತು ಆತಂಕವನ್ನು ತೆಗೆದುಹಾಕಿ ಮಾನಸಿಕ ಆರೋಗ್ಯ ಸುಧಾರಣೆ ಮಾಡುತ್ತದೆ.
ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.