ಸರ್ಕಾರಕ್ಕೆ ರೈತರಿಂದ ಒತ್ತಾಯ.
ಮಧುಗಿರಿ: ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ಬುಧವಾರ ಹಾಗೂ ಭಾನುವಾರ ರಾಗಿ ಖರೀದಿ ಕೇಂದ್ರವು ತೆರೆದಿರುವುದಿಲ್ಲಾವೆಂದು ರಾಗಿ ಖರೀದಿ ಕೇಂದ್ರದ ಅಧಿಕಾರಿ ಹೇಮಲತಾ ತಿಳಿಸಿದರು.
ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪವಿರುವ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದೆ.ಈಗಾಗಲೇ 922 ರೈತರು ನೊಂದಾಣಿ ಮಾಡಿಕೊಂಡಿಕೊಂಡಿದ್ದು ಶುಕ್ರವಾರದಿಂದಲೇ ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ತಾಲೂಕಿನಲ್ಲಿ 18 ಸಾವಿರ ಕ್ವಿಂಟಲ್ ನಷ್ಟು ರಾಗಿಯನ್ನು ಮಾರಾಟ ಮಾಡಲು ರೈತರು ನೊಂದಾವಣಿ ಮಾಡಿಕೊಂಡಿದ್ದಾರೆ. ಸರ್ಕಾರವು ನಿಗಧಿ ಮಾಡಿರುವಂತಹ ಕನಿಷ್ಠ 4886 ರೂಗಳ ಬೆಂಬಲ ಬೆಲೆಯನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು. ರೈತರು ಯಾವುದೇ ದಲ್ಲಾಳಿಗಳನ್ನು ಸಂಪರ್ಕಿಸದೇ ನೇರವಾಗಿ ನೊಂದಾವಣೆ ಮಾಡಿಕೊಂಡು ರಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಜೆ.ಸಿ.ಮಾತನಾಡಿ 2021 ರಲ್ಲಿ ದೆಹಲಿಯಲ್ಲಿ ನಡೆದ ಬಹು ದೊಡ್ಡ ಹೋರಾಟದ ಫಲವಾಗಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರವನ್ನು ಪಟ್ಟಣದಲ್ಲಿ ತೆರೆದಿರುವುದು ಸಂತೋಷದ ವಿಚಾರವಾಗಿದೆ. ಆದರೆ ಇನ್ನೂ ಮತ್ತಷ್ಟೂ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗಧಿಪಡಿಸ ಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಹುಣಸೆ ಬೆಳೆ ಹೆಚ್ಚಾಗಿದ್ದರೂ ಸಹ ಈ ಬಂಗಾರದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡಿಸಲಾಗಿಲ್ಲ. ರಾಜ್ಯ ಸರ್ಕಾರವು ಹುಣಸೆ ಅಭಿವೃದ್ಧಿ ಮಂಡಲಿಯನ್ನು ರಚನೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
For More Updates Join our WhatsApp Group :




