ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಗೊಳಿಸುವ ಟ್ಯಾಂಕ್-ಟಾಪ್ ಎಫೆಕ್ಟ್, ಏನಿದು? ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಗೊಳಿಸುವ ಟ್ಯಾಂಕ್-ಟಾಪ್ ಎಫೆಕ್ಟ್, ಏನಿದು? ವೈರಲ್

ಸೋಶಿಯಲ್ ಮೀಡಿಯಾ ಎಂಬುದು ಎಷ್ಟೊಂದು ಬದಲಾವಣೆಗಳನ್ನು ತರುತ್ತದೆ. ಯಾವ ವಿಡಿಯೋ ಹಾಕಿದ್ರೆ ಹೆಚ್ಚು ಲೈಕ್ಸ್, ಕಾಮೆಂಟ್, ವಿವ್ಸ್ ಬರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ಆದರೆ ಲೈಕ್ಸ್, ಕಾಮೆಂಟ್, ವಿವ್ಸ್ ಅಷ್ಟೊಂದು ಸುಲಭದಲ್ಲಿ ಬರುವುದಿಲ್ಲ. ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ವಿಷಯ ಇಷ್ಟವಾಗಬೇಕು. ಅದಕ್ಕಿಂತಲ್ಲೂ ಈ ವಿಡಿಯೋ ಬಳಕೆದಾರರನ್ನು ತಲುಪಬೇಕು.  ಆದರೆ ಇಲ್ಲಿ ಲೈಕ್ಸ್, ವಿವ್ಸ್ ಪಡೆಯುವುದು ಸುಲಭದ ಸಂಗತಿಯಲ್ಲ. ಇದರ ಜತೆಗೆ ಇವುಗಳ ಅಲ್ಗಾರಿದಮ್ಗಳನ್ನು ಅರ್ಥಮಾಡಿಕೊಳ್ಳುವುದು ಕಡಿಮೆ ಸಾಧನೆಯಲ್ಲ. ಇಲ್ಲೊಂದು ಯುವತಿ ಹೊಸ ಪದಗುಚ್ಛವನ್ನು ಸೃಷ್ಟಿಸಿದ್ದಾಳೆ. ಕಂಟೆಂಟ್ ಕ್ರಿಯೆಟರ್ ಜರಾ ದಾರ್ ಎಂಬುವವರು ಹೊಸ ಪ್ರಯೋಗವನ್ನು ಕಂಡುಕೊಳ್ಳುವ ಮೂಲಕ ವೈರಲ್ ಆಗಿದ್ದಾಳೆ. ಟ್ಯಾಂಕ್-ಟಾಪ್ ಎಫೆಕ್ಟ್  ಎಂಬ ಹೊಸ ವಿಚಾರವನ್ನು ಇಲ್ಲಿ ತಿಳಿಸಿದ್ದು, ಇದನ್ನು ಆಕೆ ವೈರಲ್ ಹ್ಯಾಕ್ ಎಂದು ಕರೆದಿದ್ದಾಳೆ.

ಈ ಯುವತಿ ಟ್ಯಾಂಕ್-ಟಾಪ್ ಎಫೆಕ್ಟ್ ಎಂದು ಈ ವಿಡಿಯೋವನ್ನು ಕರೆದಿದ್ದು, ಈ ವಿಡಿಯೋದಲ್ಲಿ ಒಂದೇ ವಿಷಯದ ಬಗ್ಗೆ ಮಾತನಾಡಿದ್ದಾಳೆ.  ಆದರೆ ಎರಡು ವಿಡಿಯೋ ಸೃಷ್ಟಿಯಾಗಿದೆ. ಜರಾ ದಾರ್ ಒಂದು ವಿಡಿಯೋದಲ್ಲಿ ಸಾಧರಣವಾದ ಬಟ್ಟೆಯನ್ನು ಧರಿಸಿದ್ದಾಳೆ. ಇದನ್ನು ಟ್ಯಾಂಕ್-ಟಾಪ್ ಎಫೆಕ್ಟ್ ಬದಲಾವಣೆ ಮಾಡಿಕೊಂಡಾಗ ಶಾರ್ಟ್ಸ್ ಆಗಿರುವ ಬಟ್ಟೆಯಲ್ಲಿ ತೋರಿಸಿದೆ. ಇದು ಟ್ಯಾಂಕ್-ಟಾಪ್ ಎಫೆಕ್ಟ್ ಎಂದು ಹೇಳಿದ್ದಾಳೆ. ಈ ಎರಡೂ ವಿಡಿಯೋಗಳನ್ನು ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ Instagram ಹಾಗೂ ಎಕ್ಸ್ ಖಾತೆ, YouTube ಗೆ ಅಪ್ಲೋಡ್ ಮಾಡಿದ್ದಾಳೆ. ಈ ವೇಳೆ ಎರಡು ವಿಡಿಯೋಗೆ ಬಂದಿರುವ ಲೈಕ್ ಹಾಗೂ ವಿವ್ಸ್ಗಳನ್ನು ಹೋಲಿಸಿದ್ದಾಳೆ.

ಲಿಂಕ್ಡ್ಇನ್ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿ ಟ್ಯಾಂಕ್-ಟಾಪ್ ಎಫೆಕ್ಟ್ ಫಲಿತಾಂಶವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾಳೆ. ಒಂದು ವಿಷಯದ ಬಗ್ಗೆ ಎರಡು ವಿಡಿಯೋವನ್ನು ಇಲ್ಲಿ ಹಾಕಿದ್ದಾನೆ. ಒಮ್ಮೆ ಸಾಮಾನ್ಯ ಟಾಪ್ ಧರಿಸಿ, ಮತ್ತು ಒಮ್ಮೆ ಟ್ಯಾಂಕ್ ಟಾಪ್ ಎಫೆಕ್ಟ್ ಮಾಡಿದ್ದೇನೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲು ಹೀಗೆ ಮಾಡಿದ್ದೇನೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿದಾಗ ಇದರ ಫಲಿತಾಂಶ 28% ರಷ್ಟು ಹೆಚ್ಚಾಗಿದೆ. ಎಕ್ಸ್ನಲ್ಲಿ ಅಲೋಡ್ ಮಾಡಿದಾಗ ಇದರ ವೀಕ್ಷಣೆ ದ್ವಿಗುಣವಾಗಿದೆ. ಆದರೆ YouTube ನಲ್ಲಿ ವೀಕ್ಷಣೆ ಕಡಿಮೆ ಬಂದಿದೆ ಎಂದು ಹೇಳಿದ್ದಾಳೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *