T20 ವಿಶ್ವಕಪ್: ಸಂಜು ಸ್ಯಾಮ್ಸನ್ ಮೌನ ಮುರಿದ ಸಫಲತೆಯ ಹಿಂದೆ ಗಂಭೀರ್.

T20 ವಿಶ್ವಕಪ್: ಸಂಜು ಸ್ಯಾಮ್ಸನ್ ಮೌನ ಮುರಿದ ಸಫಲತೆಯ ಹಿಂದೆ ಗಂಭೀರ್.

ಅವಕಾಶ ಸಿಕ್ಕು ಭಾರತದ ಗೆಲುವಿಗೆ ಚಾಲಕ, ಬ್ಯಾಟಿಂಗ್ ಲೈನ್ ಬದಲಾವಣೆ.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಈ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ವಿಶ್ವಕಪ್ ಆರಂಭವಾದ ಬಳಿಕ ಸ್ಯಾಮ್ಸನ್ ಬೆಂಚ್​ನಲ್ಲಿದ್ದರು. ಆರಂಭಿಕನಾಗಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಕಾಣಿಸಿಕೊಂಡಿದ್ದರು.

ಅತ್ತ ಅಭಿಷೇಕ್ ಶರ್ಮಾ ಸತತವಾಗಿ ವಿಫಲರಾದರೂ ಸಂಜು ಸ್ಯಾಮ್ಸನ್​ಗೆ ಚಾನ್ಸ್ ನೀಡಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಭಾರತ ತಂಡ ವಿಶ್ವಕಪ್​ನ ಸೆಮಿಫೈನಲ್​ಗೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ಗೆ ಇಷ್ಟು ದಿನ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗಿಟ್ಟಿರುವುದೇಕೆ? ಎಂಬ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆಗೆ ನಿರ್ದಿಷ್ಟ ಕಾರಣಗಳನ್ನು ಮುಂದಿಡುವ ಮೂಲಕ ಗಂಭೀರ್ ಉತ್ತರಿಸಿದ್ದಾರೆ.

ಸಂಜು ಸ್ಯಾಮ್ಸನ್​ರನ್ನು ಹೊರಗಿಡಲು ಕಾರಣವೇನು?

ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದರು. ಅವರು ಕಣಕ್ಕಿಳಿದ ಐದು ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು 10, 6, 0, 24, 6 ರನ್ ಮಾತ್ರ. ಅಂದರೆ ಅವರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರು.

ಈ ಒತ್ತಡದ ಪರಿಸ್ಥಿತಿಯಿಂದ ಅವರನ್ನು ಹೊರತರಲು ಮತ್ತು ಮಾನಸಿಕವಾಗಿ ರಿಫ್ರೆಶ್ ಆಗಲು ವಿರಾಮ ನೀಡಬೇಕಿತ್ತು. ಹೀಗಾಗಿ ಟಿ20 ವಿಶ್ವಕಪ್​ನ ಆರಂಭಿಕ ಪಂದ್ಯಗಳಿಗೆ ಸಂಜು ಸ್ಯಾಮ್ಸನ್​ರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಿರಲಿಲ್ಲ  ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *