21 ದಿನಗಳ ಕಾಲ ಪಣತ್ತೂರು ಮುಖ್ಯ ರಸ್ತೆಯಲ್ಲಿ ಸಂಚಾರ ನಿರ್ಬಂಧ.

ಬೆಂಗಳೂರು: ಹೆಚ್.ಎ.ಎಲ್ ಏ‌ರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ 10.10.2025 ರಿಂದ 21 ದಿನಗಳ…

ಬೆಂಗಳೂರಿನ ಟ್ರಾಫಿಕ್ ಮೇಲೆ ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ಗರಂ!

ಬೆಂಗಳೂರು: ಮೂಲ ಸೌಲರ್ಯಗಳ ಕೊರತೆ, ಟ್ರಾಫಿಕ್ಮತ್ತು ರಸ್ತೆ ಗುಂಡಿಗಳಂತಹ ಸಮಸ್ಯೆಗಳಿಂದಾಗಿ ರಾಜಧಾನಿ ಬೆಂಗಳೂರು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ನಗರದಲ್ಲಿನ ರಸ್ತೆ ಗುಂಡಿಗಳು ಮತ್ತು ಕಸದ ಬಗ್ಗೆ ಚೀನಾ ಉದ್ಯಮಿಯೊಬ್ಬರು ತಮ್ಮನ್ನು ಪ್ರಶ್ನಿಸಿದ್ದಾರೆಂದು ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಜುಂದಾರ್​ ಶಾ ಇತ್ತೀಚೆಗಷ್ಟೇ ಪೋಸ್ಟ್​ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್​ ಒಬ್ಬರು ಧ್ವನಿ ಎತ್ತಿದ್ದಾರೆ. ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಟ್ರಾಫಿಕ್​ ಬಗ್ಗೆ ಮಾಜಿ ಕ್ರಿಕೆಟರ್​ ಸುನೀಲ್​ ಜೋಶಿ ಅಸಮಾಧಾನ ಹೊರ ಹಾಕಿದ್ದಾರೆ. ಸರಕು ಸಾಗಣೆ ವಾಹನಗಳಿಂದ ಆಗುತ್ತಿರೋ ತೊಂದರೆ ಬಗ್ಗೆ ಗಮನ ಸೆಳೆದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವಿಮಾನ ನಿಲ್ದಾಣ ಮಾರ್ಗದಲ್ಲಿ ಹಗಲಿನ ವೇಳೆಯೂ ಸರಕು ಸಾಗಣೆ ಮಾಡುವ ವಾಹನಗಳು ಸಂಚಾರ ನಡೆಸುತ್ತಿವೆ. ಇವುಗಳಿಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ಇರುವಾಗ ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಸರಕು ಸಾಗಣೆ ಮಾಡುವ ವಾಹನಗಳು ಫಾಸ್ಟ್ ಲೇನ್‌ಗಳನ್ನು ಬಂದ್ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ…

“ಬೆಂಗಳೂರು-ಡೆಹಲಿ ಫ್ಲೈಟ್ ಕಾಲಕ್ಕೂ ಟ್ರಾಫಿಕ್!” – ರಾಜನ್ ಆನಂದನ್ ಟ್ವೀಟ್ ವೈರಲ್.

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಉದ್ಯಮಿಗಳು ರೊಚ್ಚಿಗೆದ್ದಂತೆ ಕಾಣುತ್ತಿವೆ. ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಉದ್ಯಮಿಗಳೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ…

ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ.

ಬೆಂಗಳೂರು : ಬೆಂಗಳೂರು ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ, ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆಯಲ್ಲೂ ಬೆಂಗಳೂರು ಮುಂದೆ ಎನ್ನುತ್ತಿದೆ. ಇದೀಗ ಈ ಸಾಲಿಗೆ ಪಾದಚಾರಿಗಳ…

ಅ.1ರಿಂದ WFH ಅಂತ್ಯ: ಬೆಂಗಳೂರು ಟ್ರಾಫಿಕ್ ಡಬಲ್ ಆಗಲಿದೆಯಾ?

 ಬೆಂಗಳೂರು: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ…

CM ಸಿಟಿ ರೌಂಡ್: ಹದಗೆಟ್ಟ ರಸ್ತೆಗಳ ಪರಿಶೀಲನೆ ನಡುವೆ ಸಿದ್ದರಾಮಯ್ಯನವರೊಂದಿಗೆ ಸೆಲ್ಫಿ ಸಿಕ್ಕ ಸುಖ!

ಬೆಂಗಳೂರು :ಬೆಂಗಳೂರು ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಗೊಂದಲಗೊಳಿಸುವ ಗುಂಡಿ ತುಂಬಿದ ರಸ್ತೆಗಳ ಮೇಲೆ ನಡೆದು…

“ರಸ್ತೆಗುಂಡಿಗಳ ವಿರುದ್ಧ ಆಕ್ರೋಶ ಇದೆ, ಆದರೆ ನಗರ ತೊರೆಯೋದು ಇಲ್ಲ” ಎಂಬ ಖಚಿತ ಭರವಸೆ.

ಬೆಂಗಳೂರು: ನಗರದ ರಸ್ತೆಗುಂಡಿಗಳ ಪರಿಸ್ಥಿತಿ ಬಗ್ಗೆ ಪ್ರತಿದಿನವೂ ಆಕ್ರೋಶ ಮಳೆಯಾಗುತ್ತಿದ್ದು, ಕೆಲ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ನಿರ್ಧಾರವನ್ನೂ ಪರಿಗಣಿಸುತ್ತಿವೆ ಎಂಬ ಸುದ್ದಿಗಳ ನಡುವೆ, ಟ್ರಕ್ ಲಾಜಿಸ್ಟಿಕ್ಸ್‌…

ಬೆಂಗಳೂರು ಮಳೆಯಿಂದ ಕಂಗಾಲು: ಪ್ರಮುಖ ರಸ್ತೆಗಳಲ್ಲಿ ಜಲಾವೃತ, ಸಂಚಾರದ ಮೇಲೆ ಪರಿಣಾಮ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್‌ ವಾತಾವರಣ ಇನ್ನಷ್ಟು ತೀಕ್ಷ್ಣವಾಗಿದೆ. ಸಂಜೆ ವೇಳೆಗೆ ಜೋರಾಗಿ ಸುರಿದ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ನಗರದಲ್ಲಿ ವಾಹನ ಸಂಚಾರಕ್ಕೆ ಗಂಭೀರ ಅಡ್ಡಿಪಡಿಯಾಗಿದೆ.…

BMTCಗೆ ಗ್ರೀನ್ ಸಿಗ್ನಲ್! 4500 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ಕೇಂದ್ರದ ಅನುಮತಿ | ಡಕೋಟಾ ಬಸ್ಗಳು ಶೀಘ್ರವೇ ಗುಜರಿಗೆ.

ಬೆಂಗಳೂರು: ಬೆಂಗಳೂರು ನಗರ ಬಿಎಂಟಿಸಿ ಪ್ರಯಾಣಿಕರಿಗೆ ಬಹು ನಿರೀಕ್ಷಿತ ಗುಡ್ ನ್ಯೂಸ್ ಬಂದಿದೆ. ಅಪಘಾತಗಳಿಂದ ಸಂಕಟದಲ್ಲಿ ಸಿಲುಕಿರುವ ಬಿಎಂಟಿಸಿಗೆ 4500 ಹೊಸ ಎಲೆಕ್ಟ್ರಿಕ್ ಬಸ್ಸುಗಳ ಅನುಮತಿಗೆ ಕೇಂದ್ರ…

ನಡು ರಸ್ತೆಯಲ್ಲಿ ಹೊಂಡ! ನಂಜಪ್ಪ ಸರ್ಕಲ್‌ನಲ್ಲಿ ಹೂತ ವಾಹನ |

ಬೆಂಗಳೂರು: ಇದು ಬೆಂಗಳೂರಿನ ಸ್ಥಿತಿ! ನಂಜಪ್ಪ ಸರ್ಕಲ್ ಬಳಿ ನಡು ರಸ್ತೆಯಲ್ಲೇ ಒಂದು ಪಿಕಪ್ ವಾಹನ ಹೊಂಡದಲ್ಲಿ ಹೂತು ಹೋಗಿರುವ ಘಟನೆ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ವಾಹನliterally…