ಅ.1ರಿಂದ WFH ಅಂತ್ಯ: ಬೆಂಗಳೂರು ಟ್ರಾಫಿಕ್ ಡಬಲ್ ಆಗಲಿದೆಯಾ?

ಅ.1ರಿಂದ WFH ಅಂತ್ಯ: ಬೆಂಗಳೂರು ಟ್ರಾಫಿಕ್ ಡಬಲ್ ಆಗಲಿದೆಯಾ?

 ಬೆಂಗಳೂರು: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್​ ರಿಂಗ್​ ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.

ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ಸೌಲಭ್ಯ ಹಿಂಪಡೆಯಲು ನಿರ್ಧರಿಸಿವೆ ಎನ್ನಲಾಗಿದ್ದು, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ತೀರ್ಮಾನಕ್ಕೆ ಮುಂದಾಗಿವೆಯಂತೆ. ಔಟರ್​ ರಿಂಗ್​ ರೋಡ್ ನಲ್ಲಿ ಸುಮಾರು 500ರಷ್ಟು ಪ್ರತಿಷ್ಟಿತ ಕಂಪನಿಗಳಿದ್ದು, ಎರಡು ಸಾವಿರ ಆಫೀಸ್ ಗಳಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಿದ್ದವು. ಆದರೆ ಈಗ ಉದ್ಯೋಗಿಗಳು ಮತ್ತೆ ಆಫೀಸ್​ ನತ್ತ ಮುಖ ಮಾಡಬೇಕಿರುವ ಕಾರಣ ಟ್ರಾಫಿಕ್​ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *