ಬೆಂಗಳೂರಿನಲ್ಲಿ ಬೇಜವಾಬ್ದಾರಿ ಬೈಕ್ ಸವಾರ: ಹೆಲ್ಮೆಟ್ ಇಲ್ಲ, ಫೋನ್‌ನಲ್ಲಿ ಮಾತನಾಡಿ ಕಾರಿಗೆ ಡಿ*!
ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ಎಷ್ಟಿದೆ? ಎಂಬ ಪ್ರಶ್ನೆಗಳು ಮೂಡಿದೆ. ದಿನಕ್ಕೊಂದು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅನೇಕ ವಿಡಿಯೋಗಳು ಸಾಕ್ಷಿಯಾಗಿದೆ. ಈ ರೀತಿಯ ಬೇಜವ್ದಾರಿತನದ ರಸ್ತೆ ಸಂಚಾರವೇ ಕಾರಣ, ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದಲ್ಲೇ ಬೆಂಗಳೂರಿನಲ್ಲಿ ಸುರಕ್ಷತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದರಿಂದ ದಿನಕ್ಕೊಂದು ಅಪಘಾತಗಳು ನಡೆಯುತ್ತ ಇರುತ್ತದೆ. ಬೆಂಗಳೂರಿನಲ್ಲಿ ಇಂತಹ ಅಜಾಗರೂಕ ಚಾಲನೆಗಳು ಜನರಲ್ಲಿ ಕಳವಳ ಮೂಡಿಸಿದೆ. ಯೂಟ್ಯೂಬರ್ ಒಬ್ಬರು ತಮ್ಮ ಕಣ್ಮುಂದೆಯೇ ನಡೆದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೈಕ್ ಸವಾರನೊಬ್ಬ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆ ಕ್ರಾಸ್ ಮಾಡುವ ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಡ್ಯಾಶ್‌ಕ್ಯಾಮ್ ಕ್ಯಾಮರ್ದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ವಿಡಿಯೋದಲ್ಲಿ ಬೈಕ್ ಸವಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಬೈಕ್ ಚಲಿಸಿದ್ದಾನೆ. ಬೈಕ್ನಲ್ಲಿ ಮಿರರ್ ಇಲ್ಲ, ಬೈಕ್ ಹಿಂದೆ ಕುತಿರುವ ವ್ಯಕ್ತಿ ಹಾಗೂ ಸವಾರ, ಇಬ್ಬರು ಹೆಲ್ಮೆಟ್ ಕೂಡ ಧರಿಸಿಲ್ಲ. ಇನ್ನೊಂದು ಕಡೆ ವಿರುದ್ಧ ದಿಕ್ಕಿನಿಂದ ಕಾರನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಿಂದ ಯಾವುದೇ ತೊಂದರೆಗಳು ಆಗಿಲ್ಲ. ಆದರೆ ಇದು ಸಂಚಾರಿ ನಿಯಮಗಳಿಗೆ ವಿರುದ್ಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬೈಕ್ ಸವಾರನ ನಿರ್ಲಕ್ಷ್ಯ ವರ್ತನೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೈಕ್ ಸವಾರ ಫೋನ್‌ನಲ್ಲಿ ಮಾತನಾಡುತ್ತಿರುವ ಮತ್ತು ಹೆಲ್ಮೇಟ್ ಧರಿಸದೇ ಇರುವುದು ಎಷ್ಟು ಸರಿ? ಇದಕ್ಕೆ ಏನ್ ಹೇಳುತ್ತಿರಾ? ಎಂದು ವಿಡಿಯೋ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಅನೇಕ ಬಳಕೆದಾರರು ಬೈಕ್ ಸವಾರನ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದು, ಕಾರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಬೈಕ್ ಸವಾರನ್ನು ಮಾಹಿತಿಯನ್ನು ಪಡೆದು, ಆತ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ. For…
