ಮಹಿಸಾಗರ್ : ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ರ ಮೋಡಸ ಲುನವಾಡ ರಸ್ತೆಯಲ್ಲಿ ಭೀಕರಅಪಘಾತ ಸಂಭವಿಸಿದೆ. ಕಾರು ಚಾಲಕ ಬೈಕ್ಗೆ ಡಿಕ್ಕಿ ಹೊಡೆದು ಸವಾರನ ಸಮೇತ 1.5ಕಿ.ಮೀವರೆಗೆ ಎಳೆದೊಯ್ದಿರುವ ಘಟನೆ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕಾರು ಚಾಲನೆ ಮಾಡುತ್ತಿದ್ದವರು ಶಿಕ್ಷಕ ಎಂಬುದು ತಿಳಿದು ಬಂದಿದ್ದು, ಅವರ ಪಕ್ಕದಲ್ಲಿ ಸಹೋದರ ಕೂಡ ಇದ್ದರು, ಇಬ್ಬರೂ ಮದ್ಯಪಾನ ಮಾಡಿದ್ದರು ಎನ್ನಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತದ ನಂತರ ಕಾರು ಚಾಲಕ ನಿಲ್ಲಿಸಲಿಲ್ಲ, ಬದಲಾಗಿ ಬೈಕು ಮತ್ತು ಅದರ ಚಾಲಕನನ್ನು ಮುಖ್ಯ ಹೆದ್ದಾರಿಯಲ್ಲಿ ವೇಗದಲ್ಲಿ ಎಳೆದುಕೊಂಡು ಹೋಗುತ್ತಲೇ ಇದ್ದರು. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
For More Updates Join our WhatsApp Group :




