ಪ್ರಿಯಕರನನ್ನು ಕುಟುಂಬಸ್ಥರು ಕೊ*ದ ಸುದ್ದಿ ಕೇಳಿ ಕತ್ತು ಸೀಳಿಕೊಂಡ ಪ್ರೇಯಸಿ.
ಉತ್ತರ ಪ್ರದೇಶ: ತನ್ನ ಪ್ರೇಯಸಿಯ ಮದುವೆಯಾಗುತ್ತಿದೆ ಎಂದು ಗಾಬರಿಯಿಂದ ಓಡೋಡಿ ಬಂದಿದ್ದ ವ್ಯಕ್ತಿಯನ್ನು ಯುವತಿಯ ಕುಟುಂಬಸ್ಥರು ಸೇರಿ ಕೊಲೆಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲು ಮನೆಯವರು ರವಿ ಎಂಬಾತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಲು ಪ್ರಾರಂಭಿಸಿದ್ದರು. ಅದಕ್ಕೆ ಗ್ರಾಮದ ನಿವಾಸಿಗಳು ಕೂಡ ಸೇರಿಕೊಂಡರು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ನೀರು ಕೇಳಿದಾಗಲೂ ಆತನಿಗೆ ಒಂದು ತೊಟ್ಟು ನೀರನ್ನೂ ಕೊಡದೆ ಸಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರವಿ ಸಾವನ್ನಪ್ಪಿದ ಬಳಿಕ ದಾಳಿಕೋರರು ಗಂಭೀರತೆಯನ್ನು ಅರಿತುಕೊಂಡರು. ಹುಡುಗಿಯ ಚಿಕ್ಕಪ್ಪ ಪಿಂಟು ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಯಿತು, ಅವರು ರವಿ ಮತ್ತು ಪಿಂಟು ಅವರನ್ನು ಮೌದಾಹದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು.ಅಲ್ಲಿ ವೈದ್ಯರು ರವಿ ಮೃತಪಟ್ಟಿದ್ದಾರೆ ಎಂದು…
