ವಿಮರ್ಶಕರ ಬಾಯಿ ಮುಚ್ಚಿದ ತೇಜಸ್ವಿ ಬ್ಯಾಟಿಂಗ್!

ವಿಮರ್ಶಕರ ಬಾಯಿ ಮುಚ್ಚಿದ ತೇಜಸ್ವಿ ಬ್ಯಾಟಿಂಗ್!

2027ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಅಲಭ್ಯ ಎಂಬ ಟೀಕೆಗಳಿಗೆ ‘ಹಿಟ್‌ಮ್ಯಾನ್’ ಶತಕದ ಮೂಲಕ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಮೋಘ 33ನೇ ಏಕದಿನ ಶತಕ ಸಿಡಿಸಿದ ರೋಹಿತ್, ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. 40 ವರ್ಷ ವಯಸ್ಸಿನಲ್ಲೂ ಆಡುವ ಸಾಮರ್ಥ್ಯವಿದೆ ಎಂದು ತೋರಿಸಿದ್ದಾರೆ. ದೀರ್ಘ ವಿರಾಮದ ನಂತರವೂ ಲಯ ಕಂಡುಕೊಂಡು ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ.

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಇರುವುದಿಲ್ಲ ಎನ್ನುತ್ತಿದ್ದವರಿಗೆ ಹಿಟ್‌ಮ್ಯಾನ್ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ವಾಸ್ತವವಾಗಿ 2027 ರ ವೇಳೆಗೆ ರೋಹಿತ್ ವಯಸ್ಸು 40 ವರ್ಷವನ್ನು ದಾಟಿರುತ್ತದೆ. ಹೀಗಾಗಿ ಆ ವಯಸ್ಸಿನಲ್ಲಿ ಅವರು ಆಡಲು ಸಾಧ್ಯವಿಲ್ಲ, ಆದ್ದರಿಂದ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಆ ಅಭಿಪ್ರಾಯಗಳನ್ನು ಸುಳ್ಳು ಮಾಡಿರುವ ರೋಹಿತ್ ಶರ್ಮಾ, 7 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟ್ ಹಿಡಿದರೂ ತಮ್ಮ ಹಳೆಯ ಲಯವನ್ನೇ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್, ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.

ತಮ್ಮ ಏಕದಿನ ವೃತ್ತಿಜೀವನದ 33 ನೇ ಶತಕವನ್ನು ಪೂರೈಸಿರುವ ರೋಹಿತ್, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 105 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಶತಕದ ಗಡಿ ದಾಟಿದರು. ಅಡಿಲೇಡ್‌ನಲ್ಲಿ 73 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ರೋಹಿತ್, ಸಿಡ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದರು. ಈ ವರ್ಷ ರೋಹಿತ್ ಶರ್ಮಾ ಅವರ ಎರಡನೇ ಶತಕ ಇದಾಗಿದೆ. ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅವರ ಬ್ಯಾಟ್ ಆಗಸ ನೋಡಿತ್ತು. ಇದು ಮಾತ್ರವಲ್ಲದೆ ಈ ಶತಕದೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ. ಅಂದರೆ ರೋಹಿತ್ ಶರ್ಮಾ ಇದುವರೆಗೆ 50 ಶತಕಗಳನ್ನು ಬಾರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *