ನವದೆಹಲಿ : ಬಿಜೆಪಿಯವರು ರಾಜಕೀಯಕ್ಕಾಗಿ ಚರ್ಚೆ ಮಾಡ್ತಿದ್ದಾರೆ. ಫುಡ್ ಸೆಕ್ಯೂರಿಟಿ ಆಕ್ಟ್ ತಂದವರು ಮನಮೋಹನ್ ಸಿಂಗ್. ಆಗ ಮುರುಳಿ ಮನೋಹರ ಜೋಶಿ ವಿರೋಧಿಸಿ ಭಾಷಣ ಮಾಡಿದ್ರು. ಆಗ ರಾಜ್ಯಸಭೆ ಸದಸ್ಯರಾಗಿದ್ರು, ವೋಟ್ ಸೆಕ್ಯುರಿಟಿ ಆಕ್ಟ್ ಅಂತಾ ಹೇಳಿದ್ರು. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಈಗ ಮಾತನಾಡುವುದಕ್ಕೆ ಎಂದು ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಕಾಂಗ್ರೆಸ್ ಸರಕಾರ 7ಕೆಜಿ ಅಕ್ಕಿ ಕೊಟ್ಟಿತ್ತು. ಯಡಿಯೂರಪ್ಪ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತು. ಬಡವರ ಬಗ್ಗೆ ಮಾತನಾಡುವುದು ಬಹಳ ಸುಲಭ. ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಲು ತಿರ್ಮಾನ ಮಾಡಿದ್ದು ಕಾಂಗ್ರೆಸ್. ಯಾರು ತೆರಿಗೆ ಕಟ್ಟುತ್ತಾರೆ, ಸರಕಾರಿ ನೌಕರರಿದ್ದಾರೆ ಅವರಿಗೆ ಕೊಡೊದು ಬೇಡ ಅಂತಾ ಹೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾವು ಐದು ಗ್ಯಾರೆಂಟಿ ಸ್ಕೀಮ್ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾಡಿದ್ದಾರಾ..? ಬಿಜೆಪಿ ಬಡವರ ವಿರೋಧಿಯಾಗಿದ್ದಾರೆ. ಬಸ್ ನಲ್ಲಿ ಯಾರು ಪ್ರೀಯಾಗಿ ತಿರುಗಲ್ಲ ಹೇಳಿ. ಯಾರಿಗೆ ತಾರತಮ್ಯ ಮಾಡಿದ್ದೇವೆ ಹೇಳಿ ವಿಪಕ್ಷ ನಾಯಕ ಅಶೋಕ್ ಹೆಂಡತಿ ಹೋಗಲ್ವಾ..? ಜಾತಿ, ಧರ್ಮ, ಬಿಟ್ಟು ಎಲ್ಲರೂ ತಿರುಗುತ್ತಾರೆ ಎಂದರು.
ಶಾಸಕರ ಅನುದಾನ ಕೊರತೆ ಆರೋಪ
ವಿಶೇಷ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಅದನ್ನು ಬಿಟ್ಟು ಶಾಸಕರ ಅನುದಾನ ಕೊಟ್ಟಿದ್ದೇವೆ. ವಿಶೇಷ ಅನುದಾನದಲ್ಲಿ ಸ್ವಲ್ಪ ಅನುದಾನ ಕೊಟ್ಟಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಎಷ್ಟು ಭರವಸೆ ಈಡೇರಿಸಿದ್ರು ಹೇಳಿ. 2018 ರಲ್ಲಿ 600 ಭರವಸೆ ಕೊಟ್ಟಿದ್ರು 10% ಭರವಸೆ ಈಡೇರಿಸಿಲ್ಲ. ಆರ್ಥಿಕವಾಗಿ ದಿವಾಳಿ ಆಗುತ್ತೆ ಅಂತಾ ಹೇಳಿದ್ರು. ಎಲ್ಲಿ ದಿವಾಳಿತನ ಆಗಿದೆ, ಬರೀ ರಾಜಕೀಯ ಮಾಡ್ತಾರೆ ಎಂದು ಆರೋಪ ಮಾಡಿದರು.
ಪದೇ ಪದೇ ಗ್ಯಾರೆಂಟಿ ಪರಿಷ್ಕೃರಣೆ
ಡಿಸಿಎಂ ಪರಿಷ್ಕರಣೆ ಬಗ್ಗೆ ಹೇಳಿಲ್ಲ ಅಂತಾ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲಿಸುವುದು ಅಥವಾ ಪರಿಷ್ಕರಣೆ ಮಾಡಲ್ಲ. 325 ಕೋಟಿ ಮಹಿಳೆಯರು ಇದುವರೆಗೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಬಿಜೆಪಿಯವರ ಜೊತೆಗೆ ನೀವು ಮೇಳ ತಾಳ ಹಾಕ್ತೀರಿ ಎಂದು ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ಗ್ಯಾರಂಟಿಗಳಿಗೆ ದುಡ್ಡಿಲ್ಲ ಎಂಬ ಬಿಜೆಪಿ ಆರೋಪ ವಿಚಾರ
ಎಲ್ಲಿ ದುಡ್ಡಿಲ್ಲ ಯಾವುದಕ್ಕೆ ದುಡ್ಡಿಲ್ಲ ಹೇಳಿ ಸುಮ್ಮನೆ ಬಿಜೆಪಿ ಆರೋಪ ಮಾಡ್ತಿದೆ. ಬಜೆಟ್ ನಲ್ಲಿ 1 ಲಕ್ಷದ 20 ಸಾವಿರ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಇಟ್ಟಿದ್ದೇವೆ. ಅವರ ಕಾಲದಲ್ಲಿ ಎಷ್ಟು ಇಟ್ಟಿದ್ರು, ನಮ್ಮ ಕಾಲದಲ್ಲಿ ಎಷ್ಟು ಇಟ್ಟಿದ್ದೇವೆ ಹೇಳಿ ಎಂದರು.